Saturday, October 2, 2021

ಏಕಂ ಸತ್ ವಿಪ್ರಾ ಬಹುಧಾ ವದಂತಿ :- ದೇವನೊಬ್ಬನಾಮ ಹಲವು

ಏಕಂ ಸತ್ ವಿಪ್ರಾ ಬಹುಧಾ ವದಂತಿ :- ದೇವನೊಬ್ಬನಾಮ ಹಲವು :-ಭಾಗ-೦೪

ಸೃಷ್ಟಿ :- ಭಾಗ-೦೧

ಜಗತ್ತಿನ ಸೃಷ್ಟಿಯ ಬಗ್ಗೆ ಆಶ್ಚರ್ಯಜನಕವಾದ ವಿಷಯಗಳು  ವೇದಶಾಸ್ತ್ರಗಳಲ್ಲಿ ಅಡಗಿದ್ದರೇ ಅಂಥ ಶಾಸ್ತ್ರಗಳನ್ನು ಅನಧಿಕಾರಿಗಳು ಕೇವಲ ಸಂಸ್ಕೃತ ಜ್ಞಾನದ ಆಧಾರದ ಮೇಲೆ  ಮನಸೋ ಇಚ್ಛೆ ಅರ್ಥೈಸಿ  ಆ ವಿಷಯವನ್ನು ಮತ್ತಷ್ಟು ಚಿಂತಾಜನಕವಾಗಿ ಮಾಡುತ್ತಾರೆ. ವೇದಗಳಲ್ಲಿ  ಸಕಲ ಸೃಷ್ಟಿ ಅದರಲ್ಲೂ ಈ ಪೃಥ್ವಿಯನ್ನು ಸೃಷ್ಟಿ ಮಾಡಿದ ದೇವತೆಗಳ ಬಗ್ಗೆ ಸಾಕಷ್ಟು ಉಲ್ಲೇಖ ಬರುತ್ತದೆ.ಇಂದ್ರ , ರುದ್ರ , ವಿಷ್ಣು , ಪೂಷಾ , ಸವಿತೃ , ವಿಶ್ವಕರ್ಮ , ಅಗ್ನಿ ,ಸೋಮ ಭಾವವೃತ್ತ ಹೀಗೇ ನಾನಾ ದೆವತೆಗಳು ಈ ಪೃಥ್ವಿಯನ್ನು ಸೃಷ್ಟಿಸಿದ್ದಾರೆ ಎನ್ನುವ ವೇದಮಂತ್ರಗಳು ಸಿಗುತ್ತವೆ. 

ಆದರೇ ವಾಸ್ತವವಾಗಿ ಈ ಒಂದು ಪೃಥ್ವಿಯನ್ನು ಇಷ್ಟೊಂದು ದೇವತೆಗಳು ಸೃಷ್ಟಿ ಮಾಡಿದರೇ ? ಅಥವಾ  ಅಸಂಖ್ಯಾತ ಪೃಥ್ವಿಗಳಿವೆಯೇ ? ಇದ್ದರೇ ಎಲ್ಲರೂ ಸಮರ್ಥರೇ ಆದರು ಎಂಬುದು ತಾನೇ ಸ್ವತಸ್ಸಿದ್ಧವಾಘುತ್ತದೆ.  ಆದರೇ ಆತನು ತನಗೆರಡಿಲ್ಲದವನು , ಆ ಸರ್ವ ಶಕ್ತನಾದ ನಿರ್ವಿಕಾರ ,ನಿರಾಕರ ,ನಿರ್ಗುಣನಾದ ಪರಮೇಶ್ವರನು ನಿರ್ಮಾಣ ಮಾಡಿದನೇ ? ಎಂಬ ಪ್ರಶ್ನೆಗಳು ಎದ್ದುಕೊಳ್ಳುತ್ತವೆ. 

೧. ರುದ್ರನೇ ಈ ಪೃಥ್ವಿಯನ್ನು ಸೃಷ್ಟಿ ಮಾಡಿದನು  ಎಂದು ಪ್ರತಿಪಾದಿಸುವದಕ್ಕೆ ಸಾಕಷ್ಟು ವೇದ ಮಂತ್ರಗಳು ಸಿಗುತ್ತವೆ.   ಅವನಿಂದಲೇ ಮಿಕ್ಕಾದ ದೇವತೆಗಳೂ ,ಪಂಚಭೂತಗಳೂ ಹುಟ್ಟಿದವು ಎಂಬುದಾಗಿ ತಿಳಿಸುವ ವೇದಮಂತ್ರಗಳು ಉಪಲಬ್ಧವಿದೆ.ಆದ್ದರಿಂದ ರುದ್ರನ ಆರಾಧಕರು ರುದ್ರನೇ ಸರ್ವೋತ್ತಮ ಎನ್ನುತ್ತಾರೆ. ತಪ್ಪೇನೂ ಇಲ್ಲ. ಆದರೇ  ಈ ಅಭಿಪ್ರಾಯವನ್ನು ಸಮನ್ವಯದ ಹೊರತು  ಮತ್ತೊಬ್ಬರ ಮೇಲೆ ಹೇರುವದಕ್ಕಾಗುವದಿಲ್ಲ. 

೨. ವಿಷ್ಣುವೇ  ಈ ಪೃಥ್ವಿಯನ್ನು ಸೃಷ್ಟಿ ಮಾಡಿದನು  ಎಂದು ಪ್ರತಿಪಾದಿಸುವದಕ್ಕೆ ಸಾಕಷ್ಟು ವೇದ ಮಂತ್ರಗಳು ಸಿಗುತ್ತವೆ.  ಅವನಿಂದಲೇ ಮಿಕ್ಕಾದ ದೇವತೆಗಳೂ ,ಪಂಚಭೂತಗಳೂ ಹುಟ್ಟಿದವು ಎಂಬುದಾಗಿ ತಿಳಿಸುವ ವೇದಮಂತ್ರಗಳು ಉಪಲಬ್ಧವಿದೆ. ಆದ್ದರಿಂದ ವಿಷ್ಣುವಿನ ಆರಾಧಕರು ವಿಷ್ಣುವೇ ಸರ್ವೋತ್ತಮ ಎನ್ನುತಾರೆ.ತಪ್ಪೇನೂ ಇಲ್ಲ. ಆದರೇ  ಈ ಅಭಿಪ್ರಾಯವನ್ನು ಸಮನ್ವಯದ ಹೊರತು  ಮತ್ತೊಬ್ಬರ ಮೇಲೆ ಹೇರುವದಕ್ಕಾಗುವದಿಲ್ಲ. 

೩.ವಿಶ್ವಕರ್ಮನೇ ಈ ಪೃಥ್ವಿಯನ್ನು ಸೃಷ್ಟಿ ಮಾಡಿದನು  ಎಂದು ಪ್ರತಿಪಾದಿಸುವದಕ್ಕೆ ಬೆರಳೆಣಿಕೆಯಷ್ಟು  ವೇದ ಮಂತ್ರಗಳು ಸಿಗುತ್ತವೆ.  ಅವನಿಂದಲೇ ಮಿಕ್ಕಾದ ದೇವತೆಗಳೂ , ಪಂಚಭೂತಗಳೂ ಹುಟ್ಟಿದವು ಎಂಬುದಾಗಿ ನೇರವಲ್ಲದಿದ್ದರೂ  ಸಮನ್ವಯ ಮಾಡುವ ವೇದಮಂತ್ರಗಳು ಉಪಲಬ್ಧವಿದೆ. ಆದ್ದರಿಂದ ವಿಶ್ವಕರ್ಮನ ಆರಾಧಕರು ವಿಶ್ವಕರ್ಮನೇ ಸರ್ವೋತ್ತಮ  ಎನ್ನುತ್ತಾರೆ. ತಪ್ಪೇನೂ ಇಲ್ಲ. ಆದರೇ  ಈ ಅಭಿಪ್ರಾಯವನ್ನು ಸಮನ್ವಯದ ಹೊರತು  ಮತ್ತೊಬ್ಬರ ಮೇಲೆ ಹೇರುವದಕ್ಕಾಗುವದಿಲ್ಲ. 

ಹೀಗೇ ನಾನಾದೇವತಾ ಸ್ವರೂಪಗಳಿದ್ದರೂ ಆ  ನಾಮರೂಪ ವಿವರ್ಜಿತನಾದ ಪರಮೇಶ್ವರನು ತನ್ನ ಮಾಯಾ ಶಕ್ತಿಯಿಂದ ಈ ಸಕಲ ಜಗತ್ತನ್ನು ಸೃಷ್ಟಿಸಿದನು ಎಂದು ಹೇಳುವದಕ್ಕೆ ಅಡ್ಡಿಯಿಲ್ಲ. ಏಕೆಂದರೇ ಮೇಲೆ ಹೇಳಿದ ಎಲ್ಲಾ ನಾಮರೂಪಗಳಿಗೂ ಹೊರತಾದ ಆ ಸರ್ವ ಶಕ್ತನು ಸೃಷ್ಟಿಗೆ ಮೊದಲು ತಾನೊಬ್ಬನೇ ಇದ್ದನು ಎಂಬುದಾಗಿ  ವೇದಗಳು ಹೇಳುತ್ತಿವೆ. ಆದ್ದರಿಂದಲೇ  ಯಾರೇ ಆಗಲೀ ಅವರವರ ಕಲ್ಪನಾ ಸಾಮ್ರಾಜ್ಯದ  ಒಂದು ದೇವತೆಯನ್ನೇ  ಶ್ರೇಷ್ಠ ಎಂಬುದಾಗಿ ಹೇಳಿದರೇ ಅವರಿಗಿಂತ ಮೂರ್ಖರು ಮತ್ತೊಬ್ಬರಿಲ್ಲ.   

ವೇದಾಭಿಪ್ರಾಯವನ್ನು ಹೇಳಲು ಷಡಂಗ ಸಹಿತ ಸಮಗ್ರ ವೇದಗಳ ಅಧ್ಯಯನ ಮಾಡಿರಲೇ ಬೇಕು. ಇಲ್ಲವಾದಲ್ಲಿ ರುದ್ರನೇ ಶ್ರೇಷ್ಠ , ವಿಷ್ಣುವೇ ಶ್ರೇಷ್ಠ ಅಥವಾ ವಿಶ್ವಕರ್ಮನೇ ಶ್ರೇಷ್ಠ ಎನ್ನುವಂಥ ಉಪಪಂಗಡಗಳು ಹುಟ್ಟಿಕೊಂಡು ಪರಸ್ಪರ ಬಡಿದಾಡಿಕೊಳ್ಳುತ್ತಾರೆ. ಮತ್ತು ಈ  ದೇವತೆಗಳ ನಡುವೇ ಬಡಿದಾಟವನ್ನೂ ಮಾಡಿಸುತ್ತಾರೆ , ವಿಷ್ಣುವಿನ ಮುಂದೆ ರುದ್ರನು ಕೈಮುಗಿದುಕೊಂಡು ನಿಂತಿರುವ ಚಿತ್ರಗಳು ,  ರುದ್ರನ ಮುಂದೆ ವಿಷ್ಣು ಕೈಮುಗಿದುಕೊಂಡು ನಿಂತಿರುವ ಚಿತ್ರಗಳು ಅದೂ ಇಲ್ಲ ಎಂದರೇ ವಿಶ್ವಕರ್ಮನ ಮುಂದೇ ರುದ್ರ ವಿಷ್ಣು ಇಬ್ಬರೂ ಕೈಮುಗಿದುಕೊಂಡಿರುವ ಚಿತ್ರಗಳನ್ನು ಹಾಕುತ್ತ ವಿಕೃತ ಮನಸ್ಸನ್ನು ತೃಪ್ತಿಪಡಿಸಿಕೊಳ್ಳುತ್ತಾರೆ. ಆದರೇ ಆ ಸರ್ವಶಕ್ತನು ಇಂಥವರಿಗೆ ತನ್ನ ನಿಜಸ್ವರೂಪವನ್ನೂ ಎಂದಿಗೂ ಅನುಭವಕ್ಕೆ ತಂದುಕೊಳ್ಳಲು ಅವಕಾಶ ಮಾಡಿಕೊಡದೇ ಪ್ರಲಯದಲ್ಲೇ ಬಲವಂತ ಮೋಕ್ಷವನ್ನು ಕೊಡಿಸುತ್ತಾನೆ.

ಯಾರೇ ಆಗಲೀ ಯಾವುದೇ ದೇವತೆಯನ್ನು ವೇದ ಮಂತ್ರಗಳ ಆಧಾರದ ಮೇಲೆ ಅನ್ಯ ದೇವತೆಗಳಿಗಿಂತ ಶ್ರೇಷ್ಠ ಎಂಬುದಾಗಿ ಹೇಳಿದರೇ ಅವರು ಅವಶ್ಯವಾಗಿ ವೇದಗಳನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ ಎಂಬುದು ದೃಢವಾಗುತ್ತದೆ. ಕೆಲವರೋ ಗಾಯತ್ರೀ ದೇವಿಯನ್ನು ಸ್ತ್ರೀ ದೇವತೆಯಲ್ಲ ,ತ್ವಷ್ಟೃವಿನ ಅಂಶ ಮುಂತಾದ ಅಪಭ್ರಂಶಗಳ ಆಗರವನ್ನೇ ತಲೆಯ ಮೇಲೆ ಹೊತ್ತುಕೊಂಡು ತಿರುಗಾಡುತ್ತಾರೆ. ಇವೆಲ್ಲಕ್ಕೂ ಉದಾಸೀನವೇ ಮದ್ದು ಎನ್ನುವಹಾಗಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಸನಾತನ ಧರ್ಮದ ಬುನಾದಿಯಾದ *ಏಕಂ ಸತ್* ದೇವನೊಬ್ಬ ನಾಮ ಹಲವು ಎಂಬದನ್ನು ದೃಢಪಡಿಸಲಿಲ್ಲ ಎಂದರೇ ಕತ್ತೆಕಿರುಬಗಳಿಗೆ ರಸದೌತಣ. 

ಈ ಬರಹದಲ್ಲಿ ವೇದಮಂತ್ರಗಳಲ್ಲಿ ಹೇಳಿರುವ ಸೃಷ್ಟಿ ಸಂಬಂಧ ಎಲ್ಲಾ ವಿವರಗಳನ್ನು ಕೊಡುತ್ತಾ ಯಾವ ವೇದಗಳಲ್ಲಿ ಯಾವ ಯಾವ ದೇವತೆಯು ಸೃಷ್ಟಿಗೆ ಕಾರಣ ಎಂಬುದಾಗಿ ಕ್ರಾಂತದರ್ಶಿಗಳಾದ ಋಷಿಗಳು ಕಂಡುಕೊಂಡಿದ್ದಾರೆ ಎಂಬುವದನ್ನು ತಿಳಿಸುಕೊಡುತ್ತಲೇ ಇದ್ದೇನೆ. ಈ ಬರಹದಲ್ಲಿ ಸಮನ್ವಯವೇ ಮೂಲ ಉದ್ದೇಶವಾಗಿರುವದರಿಂದ ಅನ್ಯಥಾ ಪ್ರತಿಪಾದನೆಗೆ ಅವಕಾಶವಿಲ್ಲ. ವಿಷಯ ಸಂಬಂಧ ಮಾತ್ರ ಚರ್ಚೆ ಮಾಡುಬೇಕೆಂಬುದು ನನ್ನ ಕೋರಿಕೆಯಾಗಿದ್ದರೂ ಅರಬೆಂದ ಮಡಕೆಗಳು ಇಲ್ಲ ಸಲ್ಲದ ದೊಂಬರಾಟ ಮಾಡುವದನ್ನು ಬಿಡುವದಿಲ್ಲ. ಅಂಥವರನ್ನು ಉದ್ದೇಶಪೂರ್ವಕಾಗಿ ಬ್ಲಾಕ್ ಮಾಡುತ್ತೇನೆ. ಮೊದಲಿಗೆ ತಮ್ಮ ಕಲ್ಪನೆಯ ದೇವರೇ ಶ್ರೇಷ್ಠನು ಎಂಬುದಾಗಿ ಹೇಳಿಕೊಂಡು ವೇದಗಳನ್ನು ಅನ್ಯಥಾಗ್ರಹಣ ಮಾಡಿಕೊಂಡು ಹೆಣಗಾಡುತ್ತಿರುವವರಿಗೆ ಕಾಲನ ರಸದೌತಣ :- 

ಅಥರ್ವ ವೇದ :  ಋಷಿಃ -ಭೃಗು , ದೇವತೇ - ಕಾಲ , ಛಂದಃ -ಅನುಷ್ಟುಪ್ 
ಕಾಲೋ ಹ ಭೂತಂ ಭವ್ಯಂ ಚ ಪುತ್ರೋ ಅಜನಯತ್ಪುರಾ | ಕಾಲಾದೃಚಃ ಸಮಭವನ್ ಯಜುಃ ಕಾಲಾದಜಾಯತ || (೧೯,೫೪.೩ ) ||

ಅಥರ್ವ ವೇದ :- ಭೃಗು ಮಹರ್ಷಿಯು ತನ್ನ ತಪಸ್ಸಿನ ಶಕ್ತಿಯಿಂದ ಕಾಲನೆಂಬ ದೇವತೆಯನ್ನು ಸಾಕ್ಷಾತ್ಕಾರ  ಮಾಡಿಕೊಳ್ಳುತ್ತಾನೆ.  ಕಾಲನೇ ತಂದೆಯು ಕಾಲನೇ ಪುತ್ರನು , ಕಾಲನೇ ಭೂತದಲ್ಲಿಯೂ ಇದ್ದವನೂ , ಭವಿಷ್ಯದಲ್ಲಿಯೂ ಇರುವವನು ಅವನೊಬ್ಬನೇ. ಮೊದಲು ಇದ್ದವನೂ ನಂತರವೂ ಇರುವವನು ಈಗಿಲ್ಲದಿರುವನೇನು ? ಕಾಲನಿಂದಲೇ ಉಸಿರಾಟದಷ್ಟೇ ಸಲಿಲವಾಗಿ ಋಗ್ವೇದ ,ಯಜುರ್ವೇದಗಳೇ ಮೊದಲಾದವು ಹೊರಹೊಮ್ಮಿತು. ಇಲ್ಲಿ ಕಾಲನೇ ಕಾಲಾತೀತನೂ ಎಂಬ ಸ್ಪಷ್ಟ ಅರ್ಥವಿದೆ. ಆದ್ದರಿಂದ ಕಾಲದಿಂದಲೂ ಎಲ್ಲವೂ ಹುಟ್ಟಿತು ಎಂಬ ನಿರ್ದೇಶವೂ ಇದ್ದೇ ಇದೆ. 

ಋಗ್ವೇದ :-ಮನಸ್ಸೂಕ್ತ   ಅಥವಾ ಮೃತ ಸಂಜೀವನೀ ಸೂಕ್ತ 
ಋಷಿ - ಬಂಧುರ್ಗೌಪಾಯನಃ , ದೇವತಾ * ಮನ ಆವರ್ತನಃ  ಛಂದಃ 
ಯತ್ತೇ ಭೂತಂ ಚ ಭವ್ಯಂ ಚ ಮನೋ ಜಗಾಮ ದೂರಕಮ್ | ತತ್ತ ಆ ವರ್ತಯಾಮಸೀಹ ಕ್ಷಯಾಯ ಜೀವಸೇ || ೧೦,೦೫೮.೧೨ ||

ಬಂಧುರ್ಗೌಪಾಯನ ಋಷಿಯು ಇದೇ ಕಾಲನನ್ನು *ಮನ ಆವರ್ತನ*  ಅರ್ಥಾತ್ ಮನಸ್ಸನ್ನು ಚಿಂತನೆಯಲ್ಲಿ ತೊಡಗಿಸುವ ದೇವತೆ  ಎಂಬುದಾಗಿ ಸಾಕ್ಷಾತ್ಕರಿಸಿಕೊಂಡು ಮನಃ , ಪ್ರಾಣಃ ಮತ್ತು ಆತ್ಮವೂ ಒಂದೇ ಎಂಬುದಾಗಿ ಕಂಡುಕೊಂಡಿದ್ದಾನೆ. 
ಇಲ್ಲಿ ವಿಶೇಷವಾಗಿ ಈ ಚೆತನವೊಂದೇ ಭೂತ ಭವಿಷ್ಯತ್ತುಗಳಲ್ಲಿರುವ ತತ್ತ್ವ ಎಂಬುದಾಗಿ ಕಂಡುಕೊಂಡಿರುವದು ಸಾಕ್ಷಾತ್ಕಾರದ ವಿಶೇಷ. ಈ ಸೂಕ್ತ ಪಠನದಿಂದಲೇ ಶ್ರೀಶಂಕರಾಚಾರ್ಯರು ಮೃತ ಬಾಲಕನನ್ನು ಪುನರ್ಜೀವಿತನನ್ನಾಗಿ ಮಾಡಿದರು ಎಂಬುದಾಗಿ ಪ್ರಸಿದ್ಧ ಕಥೆಯೂ ಇದೆ. ಈ ಮಂತ್ರಕ್ಕೆ ಮೃತಸಂಜೀವನೀ ಸೂಕ್ತ ಎಂಬ ಹೆಸರೂ ವಿಶೇಷವಾಗಿದೆ.

ಋಗ್ವೇದ ಪುರುಷ ಸೂಕ್ತ : 
*ಪುರುಷ ಏವೇದಂ ಯದ್ಭೂತಂ ಯಚ್ಚ ಭವ್ಯಂ || ೧೦.೯೦.೦೨|| *  " ರುಚಸ್ಸಾಮಾನಿ ಜಜ್ಞಿರೇ ,ಛಂದಾಗ್ಂ ಸಿ ಜಜ್ಞಿರೇ ತಸ್ಮಾತ್ ,ಯಜುಸ್ತಸ್ಮಾದಜಾಯತ ||೧೦.೯೦.೦೯||   ಎಂಬ ವೇದಮಂತ್ರವೂ ಇದನ್ನೇ ದೃಢ ಪಡಿಸುತ್ತಿದೆ.
ಋಗ್ವೇದ : ಇದೇ ಕಾಲನನ್ನು ನಾರಾಯಣ ಮಹರ್ಷಿಯು ಇದೇ ಕಾಲನನ್ನು  *ಪುರುಷ* ಎಂಬ ದೇವತೆಯ ರುಪದಲ್ಲಿ ಕಂಡುಕೊಳ್ಳುತ್ತಾನೆ. 

ಆದ್ದರಿಂದ ಕಾಲನೇ ಪುರುಷನು , ಪುರುಷನೂ ,  ಕಾಲನೂ ಮತ್ತು ಮನಸ್ಸೂ  ಎಂಬು ಸಿದ್ಧವಾಗಿ ಪುರುಷನೇ ಪುತ್ರನು ಕಾಲನೇ ತಂದೆ ಅಥವಾ ಕಾಲನೇ ಪುತ್ರನು ಪುರುಷನೇ ತಂದೆಯು ಎಂಬುದು ಸಿದ್ಧವಾಯಿತು. ಕಾಲವೂ ಮನಸ್ಸಿನ ವ್ಯಾಪಾರವೇ ಆಗಿದೆ , ಕಾಲಾತೀತನ ರೂಪವೇ ಅವ್ಯವಹಾರ್ಯವಾದ್ದರಿಂದ ಕಾಲಾತೀತನೂ ಕಾಲನೇ ಅಥವಾ  ಪುರುಷನೇ ಆಗಿದ್ದಾನೆ ಎಂಬುವದು ಸಮನ್ವಯವಾಯಿತು. 

ಹೀಗೇ ವೇದದ ಉದ್ದಗಲ ಯಾವ ನಾಮರೂಪಗಳನ್ನೇ ಹಿಡಿದು ಹೋದರೂ ಮೂಲದಲ್ಲಿ ಆ ಸರ್ವ ಶಕ್ತನಾದ  , ರುದ್ರ ,ವಿಶ್ವಕರ್ಮ ,ವಿಷ್ಣು ,ಮುಂತಾದ ಯಾವ ನಾಮ ರೂಪವಿಶಶೇಷಣಗಳಿಲ್ಲದ  ನಿರ್ವಿಕಾರ ,ನಿರಾಕರ ,ನಿರ್ಗುಣನಾದ ಪರಮೇಶ್ವರನು ನಿರ್ಮಾಣ ಮಾಡಿದನು ಎಂಬುವದು ಸಿದ್ಧವಾಗುತ್ತದೆ. ಮುಂದಿನ ಸಂಚಿಕೆಯಲ್ಲಿ  ರುದ್ರ ,ವಿಶ್ವಕರ್ಮ ,ವಿಷ್ಣು ,ಮುಂತಾದ  ಈ ಎಲ್ಲಾ ನಾಮಗಳು ಕೇವಲ ಆ  ಸರ್ವಶಕ್ತನ ಕಾರ್ಯಕರಣ ವಿಶೇಷವೇ ಇದರಲ್ಲಿ ಯಾವದೂ ಒಂದಕ್ಕಿಂತ ಮತ್ತೊಂದು ಭಿನ್ನವಲ್ಲ ಎಂಬುದಾಗಿ ತಿಳಿಸಿಕೊಡುತ್ತೇನೆ.

ಹರಿ ಓಮ್ ತತ್ ಸತ್
ಸತ್ಯಪ್ರಕಾಶ :-

ಏಕಂ ಸತ್ ವಿಪ್ರಾ ಬಹುಧಾ ವದಂತಿ :- ದೇವನೊಬ್ಬನಾಮ ಹಲವು :-ಭಾಗ-೦೫

ವೇದಗಳಲ್ಲಿ ಹೇಳಿರುವ ಎಲ್ಲಾ ನಾಮಗಳು ಕಾರ್ಯಕರಣ ವಿಶೇಷವೇ ಆಗಿದೆ.

Wednesday, April 14, 2021

ಕಾಶಿಯಲ್ಲಿನ ಕೆಲವು ವಿಚಿತ್ರಗಳು

*ಕಾಶಿಯಲ್ಲಿನ ಕೆಲವು ವಿಚಿತ್ರಗಳು..ವಿಶೇಷಗಳು.*
1. ಕಾಶಿಯಲ್ಲಿ ಹದ್ದುಗಳು ಹಾರುವುದಿಲ್ಲ, ಹಸುಗಳು ಗುಮ್ಮುವುದಿಲ್ಲ, ಹಲ್ಲಿಗಳು ಶಬ್ದ ಮಾಡುವುದಿಲ್ಲ, ಶವಗಳಿಂದ ಕೆಟ್ಟ ವಾಸನೆ ಬರುವುದಿಲ್ಲ, ಕಾಶಿಯಲ್ಲಿ ಮರಣ ಹೊಂದಿದ ಪ್ರತಿ ಜೀವಿಯ ಬಲ ಕಿವಿ ಮೇಲಕ್ಕೆ ಎದ್ದಿರುತ್ತದೆ.

2. ಕಾಶಿಯಲ್ಲಿ ಮಂದಿರದ ಸುತ್ತಲೂ ಅನೇಕ ಚಿಕ್ಕ ಪುಟ್ಟ ಸಂದುಗಳು ಇದ್ದು ಅಂತಹ ಸಂದುಗಳು ಅನೇಕ ವಲಯಾಕಾರವಾಗಿ ಸುತ್ತಿದ ಹಾಗೆ ಇದ್ದು ಒಂದು ಪದ್ಮ ವ್ಯೂಹದ ಹಾಗೆ ಹೊಸಬರಿಗೆ ಸುಳಿವು ಸಿಗದ ಹಾಗೆ ಇರುತ್ತದೆ.

3. ಇದಃ ಪೂರ್ವ ಇಲ್ಲಿ ಅನೇಕ ಸುಂದರವಾದ ವನಗಳು, ಹೂವಿನ ಗಿಡಗಳ ಮಧ್ಯ ಇದ್ದ ಮಂದಿರವನ್ನು ವಿದೇಶೀ ದಂಡ ಯಾತ್ರಿಕರ ದಾಳಿಗಳಿಂದ ಕಾಪಾಡುವುದಕ್ಕಾಗಿ ಪ್ರಜೆ ಗಳೆಲ್ಲಾ ಗುಡಿಯ ಸುತ್ತಲೂ ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿ ಶತ್ರು ಸೈನಿಕರಿಗೆ ದಾರಿ ಇಲ್ಲದ ಹಾಗೆ ಮಾಡಿದ್ದಾರೆ.

4. ಅನೇಕ ದೇಶಗಳಿಂದ ದೊಡ್ಡ ದೊಡ್ಡ ಶಾಸ್ತ್ರವೇತ್ತರು ಬಂದು ಕಾಶಿಯಲ್ಲಿ ಅನೇಕ ರೀಸರ್ಚ್ಗಳನ್ನು ಮಾಡಿ ಆಶ್ಚರ್ಯ ಪಟ್ಟರು.

5. ಅಸಲು ಈ ಕಾಸ್ಮೋರ್ಸ್ ಎಲ್ಲಿಂದ ಬರುತ್ತಿದೆ ? 

6. ಆಗಿನ ಪೂರ್ವಿಕರು ಶಕ್ತಿ ಚಲನೆ ಇದ್ದ ಕಡೆಗಳಲ್ಲೆಲ್ಲಾ ಮಂದಿರಗಳನ್ನು ನಿರ್ಮಿಸಿದ್ದಾರೆ.

7. ಅಷ್ಟು ಪರಿಜ್ಞಾನ ಆ ಕಾಲದವರಿಗೆ ಎಲ್ಲಿಂದ ಬಂತು ಅಂತ ಆಶ್ಚರ್ಯಕ್ಕೆ ಗುರಿಯಾದರು.

8. ಕಾಶಿ ವಿಶ್ವೇಶ್ವರನಿಗೆ ಶವಭಸ್ಮ ಲೇಪನದಿಂದ ಪೂಜೆ ಪ್ರಾರಂಭಿಸುತ್ತಾರೆ.
 
9. ಕಾಶಿಯಲ್ಲಿನ ಪರಾನ್ನ ಭುಕ್ತೇಶ್ವರನ ದರ್ಶಿಸಿದರೆ ಜೀವಿಗೆ ಪರರ ಅನ್ನ ತಿಂದ ಋಣದಿಂದ ಮುಕ್ತಿ ಲಭಿಸುತ್ತದೆ.

10. ಕಾಶಿ ಕ್ಷೇತ್ರದಲ್ಲಿ ಪುಣ್ಯ ಮಾಡಿದರೆ ಕೋಟಿ ಸಂಖ್ಯೆಯಲ್ಲಿ ಫಲ ಇರುತ್ತದೆ; ಪಾಪ ಮಾಡಿದರೂ ಕೋಟಿ ಸಂಖ್ಯೆಯಲ್ಲಿ ಪಾಪ ಅಂಟಿಕೊಳ್ಳುತ್ತದೆ.

11. ವಿಶ್ವನಾಥನನ್ನು ಅಭಿಷೇಕಿಸಿದ ನಂತರ ಕೈಯ ರೇಖೆಗಳು ಬದಲಾಗುತ್ತದೆ.

12. ಇಲ್ಲಿನ ಶಕ್ತಿ ಪೀಠ ವಿಶಾಲಾಕ್ಷಿ ಅಮ್ಮನವರು,  ಜಗತ್ತಿನ ಎಲ್ಲರಿಗೂ ಅನ್ನವಿಡುವ ಅನ್ನಪೂರ್ಣ ದೇವಿ ನಿವಾಸ ಸ್ಥಳ ಕಾಶಿ.

13. ಪ್ರಪಂಚದಲ್ಲಿ ಇರುವ ಎಲ್ಲಾ ಭಾಷೆಗಳಿಗೆ ತಾಯಿ ಆಗಿರುವ ಅತೀ ಪ್ರಾಚೀನ ಸಂಸ್ಕ್ರತ ಪೀಠ ಕಾಶಿಯಲ್ಲೇ ಇರುವುದು.

*ಕಾಶಿಯಲ್ಲಿ ಗಂಗೆಯ ತೀರದಲ್ಲಿ 84 ಘಾಟ್ ಗಳು ಇದೆ......*

ಇದರಲ್ಲಿ ದೇವತೆಗಳು, ಋಷಿಗಳು, ರಾಜರು ಗಳೊಂದಿಗೆ, ಎಷ್ಟೋ ಜನರು ತಮ್ಮ ತಪಃ ಶಕ್ತಿಯಿಂದ ನಿರ್ಮಿಸಿರುವ ಎಷ್ಟೋ ಇದೆ. ಅದರಲ್ಲಿ ಕೆಲವು: 

1. *ದಶಾಶ್ವಮೇಧ ಘಾಟ್*: 
ಬ್ರಹ್ಮ ದೇವನು 10 ಸಾರಿ ಅಶ್ವಮೇಧ ಯಾಗ ಮಾಡಿರುವುದು ಇಲ್ಲೇ. ಪ್ರತಿದಿನ ಸಾಯಂಕಾಲ ವಿಶೇಷವಾದ ಗಂಗಾ ಹಾರತಿ ನಡೆಯುತ್ತದೆ.

2. *ಪ್ರಯಾಗ್ ಘಾಟ್*: 
ಇಲ್ಲಿ ಭೂಗರ್ಭದಲ್ಲಿ ಗಂಗೆಯೊಂದಿಗೆ ಯಮುನಾ, ಸರಸ್ವತೀ ನದಿ ಸಂಗಮವಾಗುತ್ತದೆ.

3. *ಸೋಮೇಶ್ವರ ಘಾಟ್:* 
ಚಂದ್ರನಿಂದ ನಿರ್ಮಿತವಾಗಿದೆ.

4. *ಮೀರ್ ಘಾಟ್:* 
ಸತೀದೇವಿ ಕಣ್ಣು ಬಿದ್ದ ಸ್ಥಳ. ವಿಶಾಲಾಕ್ಷಿ ದೇವಿ ಶಕ್ತಿ ಪೀಠ.
ಇಲ್ಲೇ ಯಮನು ಪ್ರತಿಷ್ಠಾಪಿಸಿದ ಲಿಂಗ ಇರುತ್ತದೆ.

5. *ನೇಪಾಳಿ ಘಾಟ್*:
ಪಶುಪತಿನಾಥ್ ಮಂದಿರದ ಬಂಗಾರದ ಕಲಶವನ್ನು ನೇಪಾಳದ ರಾಜ ಕಟ್ಟಿಸಿದ.

6. *ಮಣಿ ಕರ್ಣಿಕಾ ಘಾಟ್*:
ಇದು ಕಾಶಿಯ ಮೊಟ್ಟ ಮೊದಲನೆಯದು. ಇದನ್ನು ವಿಷ್ಣು ದೇವನು ಸ್ವಯಂ ಸುದರ್ಶನ ಚಕ್ರದಿಂದ ಅಗೆದು ನಿರ್ಮಿಸಿದ. ಇಲ್ಲಿ ಸಕಲ ದೇವತೆಗಳು ಸ್ನಾನ ಮಾಡುತ್ತಾರೆ. ಇಲ್ಲಿ ಗಂಗೆ ನಿರ್ಮಲವಾಗಿ ಹರಿಯುತ್ತಾಳೆ. ಇಲ್ಲಿ ಮಧ್ಯಾಹ್ನ ಸಮಯದಲ್ಲಿ ಯಾರಾದರೂ ಸುಚೇಲ ಸ್ನಾನ ಮಾಡಿದರೆ ಅವರಿಗೆ ಜನ್ಮ ಜನ್ಮದ ಪಾಪಗಳು ತೊಲಗಿ ಹೋಗುವುದು. ಜೀವಿಗೆ ಎಷ್ಟು ಪುಣ್ಯ ಪ್ರಾಪ್ತಿಯಾಗುವುದೋ ಚತುರ್ಮುಖ ಬ್ರಹ್ಮ ದೇವನಿಂದಲೂ ಕೂಡ ವರ್ಣಿಸಲು ಆಗುವುದಿಲ್ಲವಂತೆ.

7. *ವಿಶ್ವೇಶ್ವರ್ ಘಾಟ್:*
ಇವಾಗ ಸಿಂಧಿಯಾ ಘಾಟ್ ಅಂತಾರೆ. ಇಲ್ಲೇ ಅಹಲ್ಯಾ ಬಾಯಿ ತಪಸ್ಸು ಮಾಡಿದ್ದು. ಇಲ್ಲೇ ಸ್ನಾನ ಮಾಡಿ ಬಿಂದು ಮಾಧವನನ್ನು ದರ್ಶಿಸುತ್ತಾರೆ.

8. *ಪಂಚ ಗಂಗಾ ಘಾಟ್:* 
ಇಲ್ಲೇ ಭೂಗರ್ಭದಿಂದ ಗಂಗೆಯೊಳಗೆ 5 ನದಿಗಳು ಸೇರುತ್ತದೆ.

9. *ಗಾಯ್ ಘಾಟ್:*
ಗೋ ಪೂಜೆ ನಡೆಯುತ್ತದೆ.

10. *ತುಳಸಿ ಘಾಟ್*: 
ತುಳಸಿ ದಾಸ್ ಸಾಧನೆ ಮಾಡಿ ರಾಮಚರಿತ ಮಾನಸ್ ಬರೆಯುವಂತೆ ಶಿವನ ಆದೇಶ ಹೊಂದಿದನು.

11. *ಹನುಮಾನ್ ಘಾಟ್:* 
ಇಲ್ಲಿ ನಡೆಯುವ ರಾಮ ಕಥೆ ಕೇಳಲು ಹನುಮಂತನು ಬರ್ತಾರೆ.ಇಲ್ಲೇ ಸೂರ್ಯನು ತಪಸ್ಸು ಮಾಡಿ ಅನೇಕ ಶಕ್ತಿಗಳನ್ನು ಹೊಂದಿರುವ ಲೋಲಾರ್ಕ್ ಕುಂಡ ಇರುವುದು.ಇಲ್ಲೇ ಶ್ರೀ ವಲ್ಲಭಾಚಾರ್ಯರು ಜನಿಸಿದರು.

12. *ಅಸ್ಸಿ ಘಾಟ್:* 
ಪೂರ್ವದಲ್ಲಿ ದುರ್ಗಾದೇವಿ ಶುಂಭ, ನಿಶುಂಭ ಎನ್ನುವ ರಾಕ್ಷಸರನ್ನು ಸಂಹರಿಸಿ ದಂತಹ ಖಡ್ಗವನ್ನು ಹಾಕಿದ್ದರಿಂದ ಇಲ್ಲಿ ಒಂದು ತೀರ್ಥ ಉದ್ಭವಿಸಿದೆ.

13. *ಹರಿಶ್ಚಂದ್ರ ಘಾಟ್:*
ಸರ್ವವನ್ನು ಕಳೆದುಕೊಂಡು ಹರಿಶ್ಚಂದ್ರನು ಇಲ್ಲಿ ಶವ ದಹನ ಕೂಲಿಯಾಗಿ ಕೆಲಸ ಮಾಡಿ ದೈವ ಪರೀಕ್ಷೆಯಲ್ಲಿ ಗೆದ್ದು ತನ್ನ ರಾಜ್ಯವನ್ನು ಹೊಂದಿದನು. ಇಂದಿಗೂ ಇಲ್ಲಿ ನಿತ್ಯ ಚಿತೆ ಉರಿಯುತ್ತಲೇ ಇರುತ್ತದೆ.

14. *ಮಾನಸ ಸರೋವರ ಘಾಟ್:*
ಇಲ್ಲಿ ಕೈಲಾಸ ಪರ್ವತದಿಂದ ಭೂಗರ್ಭ ಜಲದಾರೆ ಸೇರುತ್ತದೆ. ಇಲ್ಲಿ ಸ್ನಾನ ಮಾಡಿದರೆ ಕೈಲಾಸ ಪರ್ವತ ಸುತ್ತಿದ ಪುಣ್ಯ ಲಭಿಸುತ್ತದೆ.

15. *ನಾರದ ಘಾಟ್:*
ನಾರದನು ಲಿಂಗ ಸ್ಥಾಪಿಸಿದ್ದಾನೆ.

16. *ಚೌತಸ್ಸಿ ಘಾಟ್:* 
ಇಲ್ಲೇ ಸ್ಕಂದ ಪುರಾಣದ ಪ್ರಕಾರ ಇಲ್ಲಿ 64 ಯೋಗಿನಿಯರು ತಪಸ್ಸು ಮಾಡಿದ್ದಾರೆ. ಇದು ದತ್ತಾತ್ರೇಯರಿಗೆ ಪ್ರೀತಿ ಪಾತ್ರ ಸ್ಥಳ... ಇಲ್ಲಿ ಸ್ನಾನ ಮಾಡಿದರೆ ಪಾಪಗಳು ತೊಲಗಿ 64 ಯೋಗಿನಿಯರ ಶಕ್ತಿಗಳು ಪ್ರಾಪ್ತಿಸುತ್ತದೆ.

17. *ರಾನಾ ಮಹಲ್ ಘಾಟ್*:
ಇಲ್ಲೇ ಪೂರ್ವದಲ್ಲಿ ಬ್ರಹ್ಮ ದೇವನು ಸೃಷ್ಟಿ ಕಾರ್ಯದಲ್ಲಿ ಬರುವ ವಿಘ್ನಗಳನ್ನು ತೊಲಗಿಸುವಂತೆ ವಕ್ರತುಂಡ 
ವಿನಾಯಕನನ್ನು ತಪಸ್ಸು ಮಾಡಿ ಪ್ರಸನ್ನ ಮಾಡಿಕೊಂಡನು.

18. *ಅಹಲ್ಯಾ ಬಾಯಿ ಘಾಟ್:*
ಈಕೆ ಕಾರಣದಿಂದಾಗಿ ನಾವು ಈ ದಿವಸ ಕಾಶಿ ವಿಶ್ವೇಶ್ವರನ ದರ್ಶನ ಮಾಡುತ್ತಿದ್ದೇವೆ.

ಕಾಶಿಯಲ್ಲಿ ಗಂಗಾ ನದಿಯ ಪ್ರವಾಹದೊಳಗೆ ಅನೇಕ ಘಾಟ್ಗಳ ಹತ್ತಿರ ಉದ್ಭವಿಸುವ ತೀರ್ಥಗಳು ಸೇರಿಕೊಳ್ಳುತ್ತದೆ.

ಪೂರ್ವ ಕಾಶಿಯಲ್ಲಿ ದೇವತೆಗಳು,ಋಷಿಗಳು,
ರಾಜರೂ ನಿರ್ಮಿಸಿದ ಅನೇಕ ಮಂದಿರಗಳು ಕಟ್ಟಡಗಳು ವನಗಳ ಮಧ್ಯ ವಿಶ್ವನಾಥನ ಮಂದಿರ ಎಷ್ಟೋ ವೈಭವೋಪೇತವಾಗಿ ಬೆಳಗುತ್ತಿತ್ತು.

ಆದರೆ ಮಹಮ್ಮದೀಯ ದಂಡ ಯಾತ್ರಿಕರು ಕಾಶಿಯನ್ನು ಲಕ್ಷ್ಯವಾಗಿ ಮಾಡಿಕೊಂಡು ದಾಳಿಯನ್ನು ಮಾಡಿ ಧ್ವಂಸ ಮಾಡಿದ ನಂತರದ ಕಾಶಿಯನ್ನು ನಾವು ನೋಡುತ್ತಿದ್ದೇವೆ.

ವಿಶ್ವನಾಥ, ಬಿಂದು ಮಾಧವ ರೊಂದಿಗೆ ಎಷ್ಟೋ ಅನೇಕ ಮಂದಿರಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಿದ್ದಾರೆ.

ಇಂದಿಗೂ ವಿಶ್ವನಾಥ ಮಂದಿರದ ನಂದಿ, ಮಸೀದು ಇರುವ ಕಡೆಯ ಕೆಡವಿದ ಮಂದಿರದ ಕಡೆಗೆ ನೋಡುತ್ತಿದೆ.

ಅಲ್ಲೇ ಶಿವನು ತ್ರಿಶೂಲದಿಂದ ತೋಡಿದ ಜ್ಞಾನವಾಪಿ ತೀರ್ಥ ಬಾವಿ ಇರುತ್ತದೆ.

ಈದಿನ ನಾವು ದರ್ಶಿಸುವ ವಿಶ್ವನಾಥ ಮಂದಿರ ಅಸಲು ಮಂದಿರಕ್ಕೆ ಪಕ್ಕದ ಇಂದೋರ್ ರಾಣಿ ಶ್ರೀ ಅಹಲ್ಯಾ ಬಾಯಿ ಹೋಲ್ಕರ್ ಅವರು ಕಟ್ಟಿಸಿದರು.

🙏🏻🙏🏻🙏🏻 ಕಾಶಿಯ ಸ್ಮರಣೆ ಸದಾ ಮೋಕ್ಷಕಾರಕ🙏🏻🙏🏻🙏🏻

Monday, April 12, 2021

ಪಂಗುನಿ ಉತ್ತರಂ ಮಾಹಾತ್ಮ್ಯಂ.

*ಪಂಗುನಿ ಉತ್ತರಂ ಮಾಹಾತ್ಮ್ಯಂ.*

ಇತ್ತೀಚೆಗಷ್ಟೇ ಪಂಗುನಿ ಉತ್ತರಂ ಎಂಬ ವಿಶೇಷ ದಿನವನ್ನು 28.3.2021 ರಂದು  ಸಂಭ್ರಮದಿಂದ ಆಚರಿಸಿದ್ದೇವೆ. ಇದು ಸಾಮಾನ್ಯವಾಗಿ ತಮಿಳುನಾಡಿನ ದೇವಸ್ಥಾನಗಳಲ್ಲೂ, ಕರ್ನಾಟಕ, ಆಂಧ್ರದಲ್ಲಿ ಶ್ರೀವೈಷ್ಣವ ಸಂಪ್ರದಾಯದ ಪೂಜಾ ಕೈಂಕರ್ಯಗಳು ಇರುವ ದೇವಸ್ಥಾನಗಳಲ್ಲೂ , ಮನೆಗಳಲ್ಲೂ  ಆಚರಿಸುತ್ತಾರೆ. ಆದರೆ ಇದು ಕೇವಲ ಶ್ರೀವೈಷ್ಣವರಿಗಷ್ಟೇ ಮೀಸಲಾದ ಹಬ್ಬವಲ್ಲ. ಇದರ ವೈಶಿಷ್ಟ್ಯವನ್ನು ತಿಳಿದರೆ, ಎಲ್ಲರೂ ಸಂಭ್ರಮದಿಂದ ಕೊಂಡಾಡಬಹುದಾದ ಹಬ್ಬದ ದಿನ. ಆ ವಿಶೇಷ ಏನೆಂದು ತಿಳಿಸುವುದೇ ಈ ಲೇಖನದ ಉದ್ದೇಶ. 

ಹಿಂದೆ ಕೃತಯುಗದಲ್ಲಿ ಸಮುದ್ರ ಮಥನ ನಡೆಯಿತಷ್ಟೇ. ಎಷ್ಟೋ ದಿನಗಳ ಕಾಲ ನಡೆದ ಕಾರ್ಯ ಅದು. ಅದೂ ದೇವಮಾನದಲ್ಲಿ! ಅದು ಒಂದು ಸಾಹಸವೇ ಸರಿ. ಇಂದಿನ    ಕಾಲಮಾನದಲ್ಲೂ, ಈ ಕೃತಕ ಯುಗದಲ್ಲೂ ನಾವು ಊಹಿಸಿಕೊಳ್ಳಲಾಗದ ಒಂದು ಅದ್ಭುತ ದೈವಕಾರ್ಯ. ಈ ಸಮುದ್ರಮಥನದಲ್ಲಿ ಎಷ್ಟೋ ಅಪರೂಪದ ವಸ್ತುಗಳು ಕ್ಷೀರಸಮುದ್ರದಿಂದ ಮೇಲೆದ್ದು, ಅವುಗಳಲ್ಲಿ  ಹಲವು ದೇವತೆಗಳ ಪಾಲಿಗೇ  ಸೇರಿದವು.  ಅಸುರರು ಐರಾವತವನ್ನೂ, ಉಚ್ಚೈಶ್ರವಸ್ಸನ್ನೂ, ಕೌಸ್ತುಭಮಣಿ ಮುಂತಾದವನ್ನೆಲ್ಲಾ ನಿರಾಕರಿಸಿ ಕೇವಲ ಅಮೃತದ ಮೇಲೆಯೇ ಕಣ್ಣಿಟ್ಟಿದ್ದರಿಂದ ಇವೆಲ್ಲಾ ದೇವತೆಗಳ ಪಾಲಾದವು. ಈ ಮಧ್ಯೆ ಉಂಟಾದ ಹಾಲಾಹಲವೆಂಬ ಭಯಂಕರ ವಿಷವನ್ನು ದೇವತೆಗಳ ಪ್ರಾರ್ಥನೆಯ ಮೇರೆಗೆ ಮಹಾರುದ್ರದೇವನೇ ತನ್ನ ಕಂಠದಲ್ಲಿ ಧರಿಸಿದ.
ಈ ಮಥನದಲ್ಲಿ ಕ್ಷೀರಾಬ್ಧಿಯಿಂದ ಉದಿಸಿದ ಅಪೂರ್ವ ರತ್ನವೇ ಶ್ರೀ ಮಹಾಲಕ್ಷ್ಮೀದೇವಿ. ಅವಳು ಹೀಗೆ ಅವತರಿಸಿದ ದಿನವೇ ಫಾಲ್ಗುಣ ಮಾಸದ ಉತ್ತರಾ ನಕ್ಷತ್ರದ ಶುಭದಿನ. ತಮಿಳಿನಲ್ಲಿ, ಅಂದರೆ ಸೌರಮಾನದಲ್ಲಿ ಫಾಲ್ಗುಣವನ್ನು ಪಂಗುನಿ ಮಾಸ ಎನ್ನುತ್ತಾರೆ. 

ಹೀಗೆ ಪಾಲ್ಗಡಲಿನಿಂದೆದ್ದ ಮಹಾಲಕ್ಷ್ಮಿಯನ್ನು ದೇವತೆಗಳೂ, ಅಸುರರೂ ಬಿಟ್ಟ ಕಣ್ಣು, ತೆರೆದ ಬಾಯಿಗಳಿಂದ ಎವೆ ಇಕ್ಕದೇ ನೋಡತೊಡಗಿದರು. ಇಂಥಾ ಅಪೂರ್ವ ಸುಂದರಿ ತಮ್ಮನ್ನು ವರಿಸಬಾರದೇ ಎಂದೂ ಮನದಲ್ಲೇ ಆಸೆಪಟ್ಟು, ಅವಳ ಗಮನ ಸೆಳೆಯಲು ವಿಚಿತ್ರ ಹಾವಭಾವಗಳನ್ನೂ ಪ್ರದರ್ಶಿಸಿದರು. ಆದರೆ, ಲಕ್ಷ್ಮೀದೇವಿ ಇವರಾರನ್ನೂ ಕಡೆಗಣ್ಣಿಂದಲೂ ನೋಡದೆ, ಮೆಲ್ಲಮೆಲ್ಲನೆ ಅಡಿಯಿಟ್ಟು, ಆದಿಶೇಷನ ಮೇಲೆ ಮಲಗಿ ನಸುನಗುತ್ತಲೇ ಎಲ್ಲವನ್ನೂ ವೀಕ್ಷಿಸುತ್ತಿದ್ದ  ಶ್ರೀಮನ್ನಾರಾಯಣನ ಬಳಿಸಾರಿ, ನಮಸ್ಕರಿಸಿ, ಅವನ ತೊಡೆಯನ್ನೇರಿ,  ಎದೆಯ ಮೇಲೂ ಕಾಲಿಟ್ಟು ಅಲ್ಲೇ ಕುಳಿತುಬಿಟ್ಟಳು. ಅವಳು ಪಾದ ಊರಿದ ಜಾಗದಲ್ಲಿ ಶಾಶ್ವತವಾದ ಒಂದು ಚಿಹ್ನವೇ ಮಚ್ಚೆಯಂತೆ ಉಳಿದುಹೋಯಿತು. ಅದನ್ನೇ ಶ್ರೀವತ್ಸವೆನ್ನುತ್ತಾರೆ.
ಶ್ರೀಮನ್ನಾರಾಯಣನೂ ಅವಳನ್ನು ಪ್ರೀತಿಯಿಂದ ಆಲಂಗಿಸಿ, ಪತ್ನಿಯನ್ನಾಗಿ ಸ್ವೀಕರಿಸಿದ. ಲಕ್ಷ್ಮೀಪತಿಯಾಗಿ ಅವನೂ ಶೋಭಿಸಿದ. 

ನಮಗೆಲ್ಲ ಶ್ರೀ ಮಹಾವಿಷ್ಣುವೇ ತಂದೆ. ಅವನ ಪತ್ನಿಯಾದ ಲಕ್ಷ್ಮೀದೇವಿಯೇ ನಮಗೆಲ್ಲಾ ತಾಯಿ. ಶ್ರೀ ಮಹಾವಿಷ್ಣುವಿಗೂ ಲಕ್ನ್ಮೀಪತಿತ್ವ ಎನ್ನುವುದು  ಒಂದು ವಿಶಿಷ್ಟವಾದ ಬಿರುದು. ಅವಳು ಪಕ್ಕದಲ್ಲಿರುವುದರಿಂದಲೇ ದಂಡಧರ, ದುಷ್ಟ ಶಿಕ್ಷಕ ಎಂದೂ ಪ್ರಸಿದ್ಧನಾದ ಭಗವಂತನಿಗೆ  ಕರುಣಾಸಾಗರ, ದಯಾಮಯಿ, ಶಿಷ್ಠರಕ್ಷಕ,  ಭಕ್ತವತ್ಸಲ ಎಂಬ ಬಿರುದುಗಳು. 

ಇನ್ನು  ಪಾಮರರಾದ ನಮ್ಮ  ಅವಸ್ಥೆಯನ್ನು ಸ್ವಲ್ಪ  ನೋಡೋಣ. ನಾವೋ ಅನಂತ ಆಪರಾಧಗಳನ್ನು ಮಾಡಿ  ಭಗವಂತನ ಮುಂದೆ ಕೈಮುಗಿದು ನಿಲ್ಲಲೂ ಯೋಗ್ಯತೆ ಇಲ್ಲದವರು. ನಮಗೆ ನಮಸ್ಕಾರ ಮಾಡಲೂ ಗೊತ್ತಿಲ್ಲ. "ಯಥಾ ತಥಾ ವಾsಪಿ ಸಕೃತ್ ಕೃತೋಂಜಲಿಃ" ಎನ್ನುತ್ತಾರೆ ಆಳವಂದಾರರು, ತಮ್ಮ ಸ್ತೋತ ರತ್ನದಲ್ಲಿ. ಅವರು  ಭಗವದ್ರಾಮಾನುಜರ ಗುರುಗಳು. ಹೇಗೆ ಹೇಗೋ ಕೈ ಮುಗಿದರೂ ಅದನ್ನು ಅಂಜಲಿ, ನಮನ ಎಂದೇ ಸ್ವೀಕರಿಸುವನಂತೆ ಆ ದಯಾಮಯ. ಆದರೆ ಇವೆಲ್ಲಾ  ಲಕ್ಷ್ಮೀದೇವಿ, ಆ ಮಹಾತಾಯಿ ಪಕ್ಕದಲ್ಲಿದ್ದಾಗ ಮಾತ್ರ.  ನಾವು ಮಾಡಿದ ಅನಂತ ಅಪರಾಧಗಳನ್ನು ಮನ್ನಿಸುವಂತೆ ತನ್ನ ಪತಿಯ ಬಳಿ ಶಿಫಾರಸು ಮಾಡುವವಳೇ ಆಕೆ. ಇಂಥಾ ವಾತ್ಸಲ್ಯಮಯಿ ಮಹಾ ಲಕ್ಷ್ಮೀದೇವಿಯ ಅವತಾರದ ದಿನ ಈ ಫಾಲ್ಗುಣ ಮಾಸದ ಉತ್ತರೆಯ ಶುಭದಿನ. ಈ ದಿನವನ್ನು ಸಂಭ್ರಮದಿಂದ ಆಚರಿಸಿ, ಆ ಮಹಾಮಾತೆಗೆ ಕೃತಜ್ಞತಾಪೂರ್ವಕವಾಗಿ ಗೌರವಿಸಬೇಕಾದ ಒಂದು ಮಹತ್ವದ ದಿನ. 

ಶ್ರೀಮನ್ನಾರಾಯಣನ ಒಬ್ಬ ಪತ್ನಿಯಾದ ಲಕ್ಷ್ಮೀದೇವಿಯ ಅವತಾರದಿನವೆಂದು ಪ್ರಸಿದ್ಧವಾದ ಈ ಸುದಿನ, ಅವನ ಇನ್ನೊಂದು ಪತ್ನಿಯಾದ ಭೂದೇವಿಗೂ ವಿಶೇಷವಾದ ದಿನವೇ. ಹೇಗೆಂದು ನೋಡಲು ನಾವು ತ್ರೇತಾಯುಗಕ್ಕೆ, ರಾಮಾಯಣದ ಕಾಲಕ್ಕೆ ಹೋಗೋಣ. 

ಸೀತಾ ದೇವಿಯೂ ಭೂದೇವಿಯ ಅವತಾರವೆಂದು ಪ್ರಸಿದ್ಧವಿದೆಯಷ್ಟೇ. ಅವಳ ಅವತಾರವೂ ಈ ಶುಭದಿನದಿಂದೇ. ಅಂದರೆ, ಜನಕಮಹಾರಾಜ ಭೂಮಿಯನ್ನುಳುವಾಗ ಹೆಣ್ಣುಶಿಶುವೊಂದು ಸಿಕ್ಕಿ ಅದನ್ನು ತನ್ನ ಮಗಳಾಗಿ ಜನಕ ಮಹಾರಾಜ ಸ್ವೀಕರಿಸಿದ ದಿನ. ಆ ಶಿಶುವಿಗೆ ಸೀತಾ ಎಂದು ಹೆಸರಿಟ್ಟ ದಿನ. ಸೀತಾ ಮಾತೆಯೂ ಲಕ್ಷ್ಮೀದೇವಿಯಂತೆ ತನ್ನನ್ನು ಆಶ್ರಯಿಸಿದವರನ್ನೂ,  ತನ್ನನ್ನು ಹಿಂಸಿಸಿದವರನ್ನೂ  ಒಂದೇ ರೀತಿಯಾಗಿ ಅನುಗ್ರಹಿಸುವ ಮಮತಾಮಯಿ.
ಹೀಗೆ ಶ್ರೀದೇವಿ, ಭೂದೇವಿಯರಿಬ್ಬರ ಅವತಾರದ ಸುದಿನವೇ ಈ ಫಾಲ್ಗುಣ ಮಾಸದ ಉತ್ತರಾ ನಕ್ಷತ್ರದ ದಿನ. 

ಮೂರನೆಯದಾಗಿ, ರಾಮಾಯಣದಲ್ಲೇ ಉಲ್ಲೇಖವಾಗಿರುವ ಇನ್ನೊಂದು ಮಹತ್ವವೂ ಈ ದಿನಕ್ಕೆ ಇದೆ. 

ಸೀತೆಯನ್ನು ಕಳೆದುಕೊಂಡು ಪರಿತಪಿಸಿದ ಶ್ರೀರಾಮಚಂದ್ರಸ್ವಾಮಿ ಸುಗ್ರೀವನ ನೆರವಿನಿಂದ, ಮುಖ್ಯವಾಗಿ ಆಂಜನೇಯ ಸ್ವಾಮಿಯ ಸಮುದ್ರಲಂಘನ, ಸೀತಾನ್ವೇಷಣ, ಅಂಗುಲೀಯಕ ಪ್ರದಾನ ಅಶೋಕವನಭಂಜನ ಮುಂತಾದ   ಅತಿಶಯ ಸಾಹಸಗಳಿಂದ ಸೀತೆಯಿರುವುದು ಲಂಕೆಯಲ್ಲೇ ಎಂದು ತಿಳಿದ ಮೇಲೆ, ರಾವಣನ ಮೇಲೆ, ವಾನರ ಸೈನ್ಯದೊಡನೆ ದಂಡೆತ್ತಿ ಹೋಗಲು ನಿರ್ಧರಿಸಿ, ಸೇನಾ ಪ್ರಯಾಣಕ್ಕೆ ಮುಹೂರ್ತವನ್ನು ಆರಿಸಿದ್ದು ಈ ದಿನವನ್ನೇ. 
"ಉತ್ತರ ಫಲ್ಗುನೀ ಹ್ಯದ್ಯ, ಶ್ವಸ್ತು ಹಸ್ತಃ ಪ್ರವರ್ತತೇ." ಎನ್ನುತ್ತಾನೆ ರಾಮಚಂದ್ರ. "ನಾಳೆ ಹಸ್ತ ನಕ್ಷತ್ರ, ನನ್ನ ನಕ್ಷತ್ರವಾದ ಪುನರ್ವಸುವಿಗೆ ಅದು ಹೊಂದುವುದಿಲ್ಲ. ಇಂದು ಹಸ್ತ , ತಾರಾಬಲದ ಪ್ರಕಾರ ಅದು ನನಗೆ ಸಾಧನ ತಾರೆ." ಎಂದು ಅಂದೇ ಪ್ರಯಾಣ ಹೊರಟನಂತೆ. 

ನಾಲ್ಕನೆಯದಾಗಿ ಹಾಗೂ ಬಹಳ ಮುಖ್ಯವಾಗಿ ಇದು ಭಗವದ್ರಾಮಾನುಜರು ಮೂರು ಗದ್ಯರೂಪದ  ಸ್ತೋತ್ರಗಳನ್ನು ರಚಿಸಿ ಶ್ರೀರಂಗನಾಥನಿಗೂ, ರಂಗನಾಯಕಿ ಅಮ್ಮನವರಿಗೂ ಸಮರ್ಪಿಸಿ ಅವರ ಪಾದಗಳಲ್ಲಿ ಶರಣಾಗತಿ ಮಾಡಿದ ದಿನ.  ತನಗಾಗಿ ಅಷ್ಟೇ ಅಲ್ಲ, ತನ್ನ ಹೆಸರನ್ನು ಹೇಳಿದ ಅಂದರೆ ತನ್ನನ್ನಾಶ್ರಯಿಸಿದ ಎಲ್ಲರಿಗೂ ಮೋಕ್ಷವನ್ನು ದಯಪಾಲಿಸಬೇಕೆಂದು ನಮ್ಮೆಲ್ಲರ ಪರವಾಗಿ ಅವರು ಭಗವಂತನನ್ನು ಪ್ರಾರ್ಥನೆ ಮಾಡಿದ ದಿನ. ಶರಣಾಗತಿ ಗದ್ಯ, ಶ್ರೀರಂಗ ಗದ್ಯ ಹಾಗೂ ವೈಕುಂಠಗದ್ಯ ಇವೇ ಆ ಮೂರು ಗದ್ಯಗಳು. ‌

ಈ ಶುಭದಿನವನ್ನೇ ಶ್ರೀ ರಾಮಾನುಜಾಚಾರ್ಯರು ಶರಣಾಗತಿ ಮಾಡಲು ಏಕೆ ಆರಿಸಿಕೊಂಡರೆಂಬುದಕ್ಕೂ ಒಂದು ಬಲವಾದ ಕಾರಣವಿದೆ. 

ಬನ್ನಿ! ಈಗ ನಾವೆಲ್ಲ ಶ್ರೀರಂಗಕ್ಕೆ ಹೋಗೋಣ. ಅಲ್ಲಿ ಶ್ರೀ ರಂಗನಾಥನ ಸಂನ್ನಿಧಿಗೂ ಅಮ್ಮನವರ ಸಂನ್ನಿಧಿಗೂ ಸ್ವಲ್ಪ ದೂರವೇ. ರಂಗನ ಸಂನ್ನಿಧಿ ಅತ್ಯಂತ ಒಳಗಿನ ಪ್ರಾಕಾರದಲ್ಲಿದ್ದರೆ, ಅಮ್ಮನವರ ಸಂನ್ನಿಧಿ ಆ ಪ್ರಾಕಾರದ ಹೊರಗೇ ಇದೆ. ಶ್ರೀರಂಗನಾಥನ ಉತ್ಸವ ಮೂರ್ತಿಯಾದ ನಂಪೆರುಮಾಳ್ ಈ ದಿನದಂದು  ಮಾತ್ರ ಆಮ್ಮನವರ ಸಂನ್ನಿಧಿಗೆ ಬಿಜಮಾಡಿಸುತ್ತಾನೆ. ಅಂದು ಅದೇ ದೊಡ್ಡ ಉತ್ಸವ. 

ವರ್ಷವಿಡೀ ತನ್ನ ಸಂನ್ನಿಧಿಗೆ ದಯಮಾಡಿಸದ ರಂಗನಾಥನ ಮೇಲೆ ರಂಗನಾಯಕಿ ಅಮ್ಮನವರಿಗೆ ಹುಸಿಕೋಪ. ಅಂದು ಮಾತ್ರ ತನ್ನ ಬಳಿ ಬಂದ ಪತಿಯ ಮೇಲೆ ದೇವಿ ಕೋಪಿಸಿಕೊಳ್ಳುತ್ತಾಳಂತೆ. ಈ ಪ್ರಣಯಕಲಹವನ್ನೂ ಉತ್ಸವದಲ್ಲಿ ಆಚರಿಸಿ ಅನುಭವಿಸುತ್ತಾರೆ, ಭಕ್ತರೂ, ಅರ್ಚಕರೂ. ಕೊನೆಗೆ ಅಮ್ಮವರ ಸಂನ್ನಿಧಿಗೆ ಹೊದಿಕೊಂಡಂತಿರುವ ವಿಶಾಲವಾದ ಮಂಟಪದಲ್ಲಿ ಈ ದಿವ್ಯದಂಪತಿಗಳಿಬ್ಬರೂ ಸಮಾಧಾನವಾಗಿ ಸೇರಿ, ಭಕ್ತಾದಿಗಳಿಗೆ ದರ್ಶನ ಕೊಡುತ್ತಾರೆ. ಆ ದಿನ ಪೂರ್ತಿಯೂ, ರಾತ್ರಿಯೂ ಸಹ  ಅಮ್ಮನವರ ಜೊತೆಯಲ್ಲೇ ಶ್ರೀ ರಂಗನಾಥಸ್ವಾಮಿ ಸಂತೋಷದಿಂದ ಸರಸ ಸಲ್ಲಾಪ ಮಾಡಿಕೊಂಡು ಕಾಲ ಕಳೆಯುತ್ತಾರೆಂಬುದು ಐತಿಹ್ಯ. ಇವರು ದಿವ್ಯದಂಪತಿಗಳು. ಅಪ್ರಾಕೃತ ದಿವ್ಯ ಮಂಗಳ ದೇಹ, ರೂಪ ಹೊಂದಿರುವವರು. ಇವರನ್ನು ನಮ್ಮಂತೆಯೇ ಸಾಧಾರಣ ದಂಪತಿಗಳೆಂದು ಭಾವಿಸಬಾರದು. ಅವರ ಸಂಭಾಷಣೆ, ಸಲ್ಲಾಪ ಏನಿದ್ದರೂ ಅವರ ಮಕ್ಕಳಾದ ನಮ್ಮನ್ನು ಕುರಿತೇ. ಭಗವಂತನೋ ನಮ್ಮ ತಪ್ಪುಗಳನ್ನು ಕಂಡು ಇವರನ್ನು ಹೇಗೆ ತಿದ್ದುವುದೆಂದು ಯೋಚಿಸುತ್ತಿದ್ದರೆ, ಆ ಮಹಾತಾಯಿ ಇವರನ್ನು ಕ್ಷಮಿಸುವಂತೆ ಪತಿಯನ್ನು ಹೇಗೆ ಅನುನಯಿಸುವುದೆಂದೇ ಯೋಚಿಸುವಳಂತೆ. ಇಂಥಾ ಸಂದರ್ಭದಲ್ಲಿ ನಾವು ಅವರಿಬ್ಬರನ್ನೂ ಒಟ್ಟಿಗೆ ದರ್ಶನ ಮಾಡಿ ನಮಸ್ಕರಿಸಿದರೆ, ಅಮ್ಮನವರ ಆಶ್ವಾಸನೆಯೂ ಅಭಯವೂ ದೊರಕಿ, ಶ್ರೀರಂಗನಾಥನ ಕ್ಷಮೆಯೂ, ಅನುಗ್ರಹವೂ ದೊರಕುವುದೆಂದು ಅರಿತವರು ಭಗವದ್ರಾಮಾನುಜರು. ಈ ಸತ್ಯವನ್ನು ಅವರನ್ನಾಶ್ರಯಿಸಿದ ನಮಗೆಲ್ಲಾ ಮನಗಾಣಿಸಲೆಂದೇ ಆವರು ಅಂದೇ ಮೊದಲು ರಂಗನಾಯಕಿ ಅಮ್ಮನವರಲ್ಲಿ ಶರಣಾಗತಿ ಮಾಡಿ,   ಶ್ರೀರಂಗನಾಥನಲ್ಲಿ ಅದನ್ನು ಒಪ್ಪಿಸಿಕೊಳ್ಳುವಂತೆ ಶಿಫಾರಸು ಮಾಡು ಎಂದು ಬೇಡಿಕೊಳ್ಳುತ್ತಾರೆ. ಮುಂದೆ ಶ್ರೀರಂಗನಾಥನೊಡನೆಯೇ ಸಾಕ್ಷಾತ್ತಾಗಿ ಸಂಭಾಷಿಸಿ, ತನ್ನನ್ನು ಒಪ್ಪಿಸಿಕೊಳ್ಳುವಂತೆ ಪ್ರಾರ್ಥಿಸುತ್ತಾರೆ. ರಂಗನಾಥನೂ ಅವರೊಡನೆ ಅಷ್ಟೇ ಸಹಜ ಸೌಲಭ್ಯದಿಂದ ಮಾತಾಡುತ್ತಾನೆ.  ಅದೇ ಗದ್ಯರೂಪದ ಶರಣಾಗತಿ ಸ್ತೋತ್ರ. ಈ ಸ್ತೋತ್ರವು ಸರಳ ಸಂಸ್ಕೃತದಲ್ಲಿ ಸಂವಾದ ರೂಪದಲ್ಲಿದೆ. ಲಕ್ಷ್ಮೀಪತಿಗೂ ಯತಿಪತಿಗೂ ನಡೆದ ಅದ್ಭುತ ಸಂಭಾಷಣೆ ಅದು.  

ರಾಮಾನುಜರು ಶರಣಾಗತಿ ಮಾಡಿದ್ದೇಕೆ? ತನಗೆ ಮೋಕ್ಷ ಬೇಕೆಂದೇ? ಅಲ್ಲ!  ಎಷ್ಟಾದರೂ ಅವರು ಆದಿಶೇಷನ ಅವತಾರವಲ್ಲವೇ? ಅವರೂ  ಶರಣಾಗತಿ ಮಾಡಬೇಕೇ ಎಂದೂ ನಾವು ಕೇಳಬಹುದು. ಖಂಡಿತವಾಗಿಯೂ  ಅವರು ಮೋಕ್ಷವನ್ನು ಬೇಡಲೇ ಇಲ್ಲ. ಅವರು ಬೇಡಿದ್ದು ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳಿಗಿಂತ ಮಿಗಿಲಾದ ಕೈಂಕರ್ಯವನ್ನು, ಅವರಿಬ್ಬರ ನಿತ್ಯಸೇವೆಯನ್ನು. "ನಿತ್ಯ ಕಿಂಕರತಾಂ ಪ್ರಾರ್ಥಯೇ." ಎಂದೇ ಬೇಡುತ್ತಾರೆ ಆಚಾರ್ಯರು, ಶರಣಾಗತಿ ಗದ್ಯದಲ್ಲಿ. 

ತನಗಾಗಿ ಮಾತ್ರವಲ್ಲದೇ ತನ್ನ ಹೆಸರನ್ನು ಹೇಳಿದವರ ಪರವಾಗಿಯೂ  ಈ ದಿವ್ಯದಂಪತಿಗಳನ್ನು ಪ್ರಾರ್ಥಿಸುತ್ತಾರೆ ಆಚಾರ್ಯರು. ತನ್ನನ್ನಾಶ್ರಯಿಸಿದವರಿಗೂ ಮೋಕ್ಷವನ್ನು ನೀಡುವಂತೆ ಭಗವಂತನಲ್ಲಿ ಕೇಳಿಕೊಳ್ಳುತ್ತಾರೆ. ಎಂಥಾ ಔದಾರ್ಯ! ಇಂಥಾ ಆಚಾರ್ಯರಿಗೆ ಇಲ್ಲ ಎನ್ನುತ್ತಾನೆಯೇ ರಂಗನಾಥ? "ತಂದೋಂ." ಎನ್ನುತ್ತಾನೆ. " ಸರಿ. ನಾನು  ರಾಮಾನುಜದಾಸ ಎಂದವರಿಗೂ ಮೋಕ್ಷವನ್ನು ಕೊಟ್ಟೆ‌" ಎನ್ನುತ್ತಾನಂತೆ ರಂಗನಾಥ. 

ಆಗಲೇ ಆಚಾರ್ಯರು ಶರಣಾಗತಿ ಗದ್ಯ, ಶ್ರೀರಂಗಗದ್ಯ ಮತ್ತು ವೈಕುಂಠಗದ್ಯಗಳೆಂಬ ಮೂರು ಗದ್ಯರೂಪದ ಸ್ತೋತ್ರಗಳನ್ನು ಅಲ್ಲಿಂದಲ್ಲೇ ರಚಿಸಿ ಸಮರ್ಪಿಸುತ್ತಾರೆ. ಅಲ್ಲದೇ, ಅವರೇ ನಿಯಮಿಸಿದ 74 ಪೀಠಸ್ಥರಾದ ಗೃಹಸ್ಥ ಉತ್ತರಾಧಿಕಾರಿಗಳಿಗೂ ಉಪದೇಶ ಮಾಡುತ್ತಾರೆ. ಅಂದಿನಿಂದ ಇಂದಿನವರೆಗೂ ಅದೇ ಮಂಟಪದಲ್ಲಿ ಈ ಶುಭದಿನದಂದು ಈ ಮೂರೂ ಗದ್ಯಗಳನ್ನು ಪಾರಾಯಣ ಮಾಡುವ ಸಂಪ್ರದಾಯ ನಡೆದು ಬಂದಿದೆ.

ಶರಣಾಗತಿ ಗದ್ಯವು ಅಮ್ಮನವರೊಡನೆ  ಮೊದಲು, ನಂತರ ರಂಗನಾಥನೊಡನೆ ರಾಮಾನುಜರು ನಡೆಸಿದ ಸುಂದರ ಸಂವಾದ ರೂಪದ ಸ್ತೋತ್ರ. ಇದು ಸಾಮಾನ್ಯವಾಗಿ ಪ್ರತಿದಿನ ಪ್ರಾತಃಕಾಲದಲ್ಲಿ ಪಠಿಸಬೇಕಾದ ಗದ್ಯ. ಇದು ವಿಸ್ತೃತವಾಗಿರುವುದರಿಂದ, ಇದನ್ನು ಪೃಥು ಗದ್ಯವೆಂದೂ ಹೇಳುತ್ತಾರೆ. 

ಎರಡನೆಯದಾದ ಶ್ರೀರಂಗಗದ್ಯವನ್ನು ಮಿತಗದ್ಯ ಎನ್ನುತ್ತಾರೆ. ಇದರಲ್ಲೂ ರಂಗನಾಥನ ಸ್ತೋತ್ರವೇ ಮುಖ್ಯವಾಗಿದೆ. ಶರಣಾಗತಿ ಮಾಡಿದ ನಂತರದ ಉತ್ತರ ಕೃತ್ಯ ಎಂದೂ ಈ ಗದ್ಯವನ್ನು ಭಾವಿಸಬಹುದು. 

ಮೂರನೆಯದಾದ ಶ್ರೀ ವೈಕುಂಠ ಗದ್ಯವು ಒಂದು ವಿಶೇಷವಾದ ವಿವರಣೆಗಳುಳ್ಳದ್ದಾಗಿದೆ. ವೈಕುಂಠಲೋಕವು ಶ್ರೀಮನ್ನಾರಾಯಣನ ನಿತ್ಯವಿಭೂತಿ. ಅಂದರೆ ಆವನು ಸದಾ ವಾಸಿಸುವ ಸ್ಥಳ. ಅದೊಂದು ಅಪ್ರಾಕೃತವಾದ ಲೋಕ. ಶುದ್ಧಸತ್ವ ಎಂಬ ದ್ರವ್ಯದಿಂದ ತನ್ನ ಸಂಕಲ್ಪದಿಂದಲೇ ಭಗವಂತನು ಸೃಷ್ಟಿಸಿದ ಒಂದು ಲೋಕ. ಎಲ್ಲ ಲೋಕಗಳಿಗಿಂದ ಮೇಲ್ಪಟ್ಟ ಲೋಕ. 

*ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ,*
*ಯದ್ಗತ್ವಾ ನ ನಿವರ್ತಂತೇ ತದ್ಧಾಮ ಪರಮಂ ಮಮ.* ಎಂದು ಗೀತೆಯಲ್ಲಿ ಶ್ರೀಕೃಷ್ಣನೇ ವರ್ಣಿಸಿರುವ ಲೋಕ. ಅವನು ಸರ್ವವ್ಯಾಪಿಯೇ ಆದರೂ ಇದು ಭಗವಂತನ ಶಾಶ್ವತವಾದ ವಾಸಸ್ಥಾನ. ಬೇರೆಲ್ಲ ಲೋಕಗಳೂ, ಎಲ್ಲಾ ಜೀವರಾಶಿಗಳ ಶರೀರಗಳೂ ಅವನ ವಾಸಸ್ಥಾನವೇ ಆದರೂ, ಅವೆಲ್ಲ ಅಳಿದು ಹೋಗುವಂಥವು. 

 ಆದರೆ ಈ ವೈಕುಂಠದ ಬಗ್ಗೆ ಅಲ್ಲಿಗೆ ಹೋಗಿ ಬಂದವರಾರೂ ನಮಗೆ ಹೇಳಿಲ್ಲವಲ್ಲ!  ರಾಮಾನುಜರಿಗೆ  ದಿವ್ಯದೃಷ್ಟಿಯಿಂದ ಗೋಚರವಾದ ಈ ಲೋಕವನ್ನು ನಾವು ಈ ಗದ್ಯವನ್ನು ಪಾರಾಯಣ ಮಾಡಿ ಅವರ ದಿವ್ಯ ದೃಷ್ಟಿಯಿಂದ ಕಂಡು ಹಾಡಿದ ಸ್ತೋತ್ರದ ಮೂಲಕವೇ ತಿಳಿದು, ಅನುಭವಿಸಿ,   ಆನಂದಿಸಬೇಕು. 

 ಈ ಮೂರೂ ಗದ್ಯಗಳನ್ನು ನಾವೂ ಇಂದು ಮಾತ್ರವಲ್ಲದೆ, ಪ್ರತಿನಿತ್ಯವೂ ಪಠಿಸಿ ನಾವೂ ಆಚಾರ್ಯರು ತೋರಿಸಿದ ಹಾದಿಯಲ್ಲಿ ಸಾಗೋಣ. ಆಚಾರ್ಯರಿಗೆ ಆಶ್ವಾಸನೆ ಕೊಟ್ಟಂತೆ,  ಶ್ರೀಮನ್ನಾರಾಯಣನು ರಾಮಾನುಜರನ್ನಾಶ್ರಯಿಸಿದ ನಮಗೆ ಖಂಡಿತ ಮೋಕ್ಷವನ್ನೀಯುವನು ಎಂಬ ದೃಢ ವಿಶ್ವಾಸವನ್ನು ಹೊಂದೋಣ. 

 ಇದು ಗದ್ಯತ್ರಯಗಳ ಒಂದು ಸ್ಥೂಲ ಪರಿಚಯ. ವಿಸ್ತಾರವಾದ ವಿವರಣೆಯನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ. 

ಶ್ರೀಮತೇ ರಾಮಾನುಜಾಯ ನಮಃ.
ಶ್ರೀಮದ್ರಾಮಾನುಜ ಚರಣೌ ಶರಣಂ ಪ್ರಪದ್ಯೇ. 

🙏🙏🙏🙏🙏

ಕೃಪೆ: ಶ್ರೀ ಕೆ.ಎಸ್. ನಾರಾಯಣಾಚಾರ್ಯರು. 

ನಿರೂಪಣೆ: 
ನಿರ್ಮಲಾ ಶರ್ಮ.

Sunday, August 26, 2018

itni Shakti Hame Dena Data Lyrics Translation | Ankush

Movie: Ankush
Music: Kuldeep Singh
Singer: Poornima

itni shakti hume dena data
man ka vishwas kamzor ho na
hum chalen nek raste pe hamse
bhoolkar bhi koi bhool ho na

give us so much strength, O Lord,
that the faith in our hearts never wavers.
may we walk the path of goodness
and we don’t make a mistake even accidentally.

door agyaan ke hon andhere
tu hamein gyaan ki roshni de
har buraai se bachte rahein hum
jitni bhi de bhali zindagi de
bair ho na kisi ka kisi se
bhaawana man mein badle ki ho na

let the darkness of ignorance be away,
give us the light of knowledge..
let us be far from all bad things,
however much life you give us, it be good.
may there be no ill will between people,
and there be no feeling of revenge.

hum chalein nek raste pe hamse
bhoolkar bhi koi bhool ho na
itni shakti humein dena data
man ka vishwas kamzor ho na

hum na sochein hamen kya mila hai
hum yeh sochen kiya kya hai arpan
phool khushiyon ke baanTein sabhi ko
sabka jeevan hi ban jaaye madhuban
apni karuna ka jal tu baha ke
kar de paavan har ik man ka kona

may we never think what we have got,
but what is it that we have contributed.
let us give the flowers of happiness to all,
and everyone’s lives become a garden of sweetness,
you flow the water of your compassion,
and make every corner of the heart pious.

hum chalein nek raste pe humse
bhoolkar bhi koi bhool ho na
itni shakti hame dena data
man ka vishwas kamzor ho na



reference

click on

Saturday, June 16, 2018

ಸರಕು


ಭ್ರಮೆಯಲ್ಲಿ ಕಣ್ಣು  ತೇಲುತಿರುವಾಗ
ಯಾವುದೋ ಅನ್ಯಗ್ರಹದಿಂದ
ಸರಕು ಬರಬೇಕು
ಬ್ಯಾಚುಲರ್ ಲೈಫ್ ನ
ಸರಿರಾತ್ರಿಯ ಕನಸ್ಸಿನಲ್ಲಿ
  ಬರುವ  ಅಪ್ಸರೆಯಂತೆ..

ಬದುಕು ಬಹುಶಃ ಇದರೊಳಗೆ
ರಮಿಸಿ, ವಿಮಿಸಿ,
ಹಳೆಯ ಭಾವನೆಗಳೆಲ್ಲ ದಹಿಸಿ
ಸ್ವಲ್ಪ ನೆಶೆಯೇರುವ ಹೊತ್ತಿಗೆ
ಮನಸ್ಸು ಯಾವುದೋ ಅನ್ಯಗ್ರಹದ
ಅತೃಪ್ತ ಆತ್ಮದೊಳಗೆ
   ವಿಲೀನವಾಗಿ ಬಿಡಬೇಕು..

Tuesday, June 5, 2018

ಬಂಧಿ...

ಗರಿ ಬಿಚ್ಚಿ ಹಾರಲೆತ್ನಿಸುತಿರುವ
   ಬಾವನೆಗಳಿಗೆ ಪದಗಳ
    ಸಂಕೋಲೆ ಹಾಕಿ
ಬಿಳಿ ಹಾಳೆಯ ಮೇಲೆ
ಕವಿತೆಯಾಗಿಸಿ
   ಕವಿಯಾಗ ಬೇಕು..
   ಇಲ್ಲ
ಚಿತ್ತ ಚಿತ್ತಾರಗಳಲ್ಲಿ ಚಿತ್ರಿಸಿ
  ಕಲಾವಿದನಾಗ ಬೇಕು...

ಕೃತಿ- ವಿಕೃತಿಯ ಮನಸ್ಸಿನ 
ಪಾತ್ರಗಳನ್ನ ಸೃಷ್ಟಿಸಿ,
ಪ್ರಪಂಚದ ರಂಗ ವೇದಿಕೆಯ
ಮೇಲೆ ಸಮಾಜ ಮುಖಿಯನ್ನಾಗಿಸಿ
ನನಗಿಷ್ಟ ಬಂದಂತೆ
ಕುಣಿಸುವ
ತಣಿಸುವ
ಕಥೆಯನ್ನೆ ಎಣೆದು
ಕಥೆಗಾರನೆ ಆಗಬೇಕು..

ಎಲ್ಲವು ನನ್ನ ಕಲ್ಪನೆಯಲಿ
ಬಂಧಿಯಾಗ ಬೇಕು..
ನಾ ಕಲ್ಪನೆಯಲ್ಲಿ
ಬಂಧಿಯಾದಂತೆ...

             ಕಿರಣ್ ಆತ್ರೇಯ...
................~•~...............

Thursday, March 22, 2018

ಕವಿತೆ ದೂಳಿಡಿದಾಗ...

ರೋಡಿನಲ್ಲೆ ಪಕ್ಕದಲ್ಲೆ
ಕಾರ್ಖಾನೆಗಳಿಂದ
ಉಗಿಯುತ್ತಿದ್ದ ಹಬೆಯಲ್ಲೆ
ಚಿಕ್ಕ ಚಿಕ್ಕ ಶೋಗಿಟ್ಟಿದ್ದ
ಪ್ಲಾಸ್ಟಿಕ್ ಗಿಡಗಳ ಜೊತೆ
ಪುಟ್ಟ ಕಂದಮ್ಮ 
ಆಯಾಗಿ ಆಟ ಆಡುವಾಗ..

ಬಾರಿ ಗಾತ್ರದ ವಾಹನಗಳು
ಉಗಿಯುತ್ತಿರುವ ಹೊಗೆಯಲ್ಲೆ
ದೂಳಿಡಿದು ಕೂತ
ಮುದುಕಿಯು ಹಳೆಯದನ್ನ
ಮೆಲುಕು ಹಾಕುವಾಗ

ಹೊಸತು ಹಳೆಯದನ್ನ
ಕಂಡಾಗ
ನನ್ನ ಕವಿತೆಗೆ
ದೂಳಿಡಿಯಿತು..

ನಿಶ್ಕ್ರಿಯನಾದ ಕವಿ
ಜಗತ್ತನ್ನ ಮರೆತು
ಮತ್ತೊಮ್ಮೆ ಬರೆಯಲು
ಆರಂಭಿಸಿದಾಗ

ಮತ್ತೆ ಮತ್ತೆ
ಕವಿತೆಗಳಿಗೆ
ದೂಳಿಡಿಯಿತು....

            ಕಿರಣ್ ಆತ್ರೇಯ..

Thursday, October 12, 2017

ಕನಸುಗಳು..

ಪ್ರೀತಿಯಿಂದ ಕಟ್ಟಿದ
     ಕನಸುಗಳು ಭಗ್ನವಾಗುವುದಿಲ್ಲ..
   ಅವು ಸದಾಕಾಲ ನಮ್ಮನ್ನ
                ಕಾಯುತ್ತವೆ....
      ಜೀವಂತವಾಗಿರುವಂತೆ...

     ಮತ್ತೋಂದಷ್ಟು ಕನಸುಗಳಿಗೆ
         ‌     ಸ್ಪೂರ್ತಿ ಆಗುತ್ತವೆ..
         ಕೋಂಡಿಯಾಗಿ 
                ಆಸರೆಯಾಗುತ್ತವೆ
           ಮತ್ತಷ್ಟು ಕನಸುಗಳಿಗೆ....
  
                                 ಕಿರಣ್ ಆತ್ರೇಯ..

Friday, August 18, 2017

ಸುಮ್ನೆ ಪ್ರೀತ್ಸಿ....

ನೀನು ದ್ವೇಷಿಸಲೇ ಬೇಕೆಂದು ಹೋರಟಿದ್ದಿಯೇ
ಸಣ್ಣ ತಪ್ಪುಗಳು ಬೆಟ್ಟದಂತೆ ಕಾಣುತ್ತವೆ...
ನೀನು ಪ್ರೀತಿಸಲೇ ಬೇಕೆಂದು ಪಣತೋಟ್ಟಿದ್ದರೆ
ತಪ್ಪು ಒಪ್ಪುಗಳಿಗೆ ಜಾಗವೇ ಇರುತ್ತಿರಲಿಲ್ಲ...
      
      ನೀನು ಅವನನ್ನ ಪ್ರೀತಿಸುತ್ತಿದ್ದೀಯವೆಂದರೆ
     ಅವನ ಆದರ್ಶ ತತ್ವಗಳನ್ನ ಒಪ್ಪಿಕೋಳ್ಳಲೇ              
                                              ಬೇಕೆಂದೇನಿಲ್ಲ...
     ನೀನು ಅವನ ಆದರ್ಶಗಳನ್ನ ಒಪ್ಪಿಕೋಂಡ
     ಮಾತ್ರಕ್ಕೆ ಅವನನ್ನ ಪ್ರೀತಿಸುತ್ತಿರುವೆ ಎಂದೇನಿಲ್ಲ...

ಅವನ ಪ್ರೀತಿಯನ್ನ ನೀನು  ತತ್ವಜ್ಞಾನಿಯಂತೆ
  ನೋಡಿದ್ದರೆ ಚರ್ಚಿಸಲಿಕ್ಕೆ ಸಾಕಷ್ಟಿರುತಿತ್ತು..
ತನ್ನ ಸ್ನೇಹವನ್ನ ಹೆಚ್ಚು ಖಚಿತಗೋಳಿಸಿದ್ದಾನೆಂದರೆ
ಅದು ನಿನ್ನ  ಪ್ರೀತಿಸುವುದಲ್ಲದೆ ಮತ್ತೇನಿರುತಿತ್ತು..
  
                                 Kiran Athrey