#ಕನ್ನಡಿಗರೇ ನಮಗಿದು ದೊಡ್ಡ #ಸವಾಲ್...!!!
ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಕನ್ನಡಕ್ಕೆ ಬಂದಿದ್ದು ಸರಸ್ವತಿ ಪುತ್ರರಿಗೆ ಏನು ಬರ ಇಲ್ಲ. . ಓದೋ ಅಭ್ಯಾಸ ಕಮ್ಮಿ ಆಗ್ತಾ ಇರೋ ಈ ಕಾಲದಲ್ಲಿ..
ಒಂದು ಭಾಷೆ, ನಾಡು, ಸಂಸ್ಕೃತಿ, ಅಲ್ಲಿನ ಸೃಜನಶೀಲತೆ ಯನ್ನ ಹೆಚ್ಚು ಪ್ರತಿಬಿಂಬುಸ್ತಾ ಇರೋದು ಚಿತ್ರರಂಗ.. ನಾಡು ನುಡಿ ಯನ್ನು ಹೆಮ್ಮೆಯಿಂದ ಮೆರುಸ್ತಾ ಇರೊರು ಕಲಾವಿದರು.. ಆದರೆ ನಾವುಗಳು ಕಲಾವಿದರನ್ನ ಕಲಾವಿದರಾಗಿ ನೋಡದೇ ಇವ ನಮ್ಮ ಹೀರೋ, ಅವ ನಿಮ್ಮ ಹೀರೋ ಇವನೇ great ಅವನು ನಾಲಾಯಕ್ ಈ ರೀತಿ ನಮ್ಮಲ್ಲೆ ನಾವು ದ್ವೇಷವನ್ನ ಮಾಡ್ಕೋಳೋದು ನಿಜಕ್ಕೂ ನಾಚಿಕೆಗೇಡು..
ಕಲಾವಿದರನ್ನ ಅವರ ಪ್ರತಿಭೆ ಇಂದ ಗುರುತಿಸೋದಕ್ಕಿಂತ ನಾವೇ ಪಕ್ಷವನ್ನಾಗಿ ಮಾಡ್ಕೋಂಡಿರೋದು ವಿಷಾದನೀಯ ಸಂಗತಿ.. ಬೇರೆ ಭಾಷೆಯ cinemaಗಳ ಅನುಕರಣೇಗಿಂತ ಹೆಚ್ಚು ಅವಶ್ಯಕತೆ ಇರೋದು ನಮ್ಮಲ್ಲಿನ ಸೃಜನಶೀಲತೆ ಯನ್ನ ಪ್ರದರ್ಶಿಸುವುದು.. ಜೊತೆಗೆ ಪೂರ್ವಪೂರ್ವಾಗ್ರಹ ಪೀಡಿತರಾಗದೇ ಪ್ರತಿಭೆ ಇರೋರನ್ನ ಮನಸ್ಪೂರ್ವಕವಾಗಿ ಒಪ್ಕೋಳ್ಳೋದು ನಮ್ಮ ಕರ್ತವ್ಯ ನು ಕೂಡ ಆಗಬೇಕಿದೆ... ಇಲ್ಲ ಅಂದರೆ 30 ವರ್ಷಗಳ ನಂತರ ಪ್ರತಿಭೆಯನ್ನ ಗುರುತಿಸೋ ಕಡೆ ಪ್ರತಿಭೆಗಳು ಮೆರೆಯುತ್ತೆ. ಮತ್ತೆ ಆಗ ನಾವು ಕನ್ನಡಿಗರಾಗಿ ಹುಟ್ಟಿ ಬೇರೆ ಭಾಷಿಗ ಅಂತ ಹೇಳ್ದಾಗ ಕನ್ನಡಿಗರಿಗೇ ಸ್ವಲ್ಪ acidity ಜಾಸ್ತಿ ಆಗುತ್ತೆ... ನಮ್ಮ ಭಾಷೆಯ ಕಲಾವಿದರನ್ನ ಪೂರ್ವಾಗ್ರಹ ಪೀಡಿತ ರಾಗದೆ ಪ್ರೀತಿಸೋದು ನಿಜಕ್ಕೂ ನಮಗೆ ದೊಡ್ಡ ಸವಾಲ್....!!!
Kiran Athrey
No comments:
Post a Comment