Saturday, June 20, 2015

ಕವಿಯಾದೆನು


ನೋಡಿ ನಿನ್ನ ಕವಿಯಾದೆನು 
ಕಲೆಯ ರಸದ ಭಲೆಯಲಿ ಸೆರೆಯಾದೆನು......

ಹೂವಿನಂತೆ ನಾಚಿ ನಿನ್ನ ಅದರವು  
ದುಂಬಿಯಂತೆ ಕರೆಯುತಿದೆ ನನ್ನ ಭಾವವು....

 ಕೋಗಿಲೆಯ ದನಿ ನಿನ್ನ ರಿಂಗಣ ಕಂಠವು   
ಸಪ್ತ ರಸದಲಿ ಹಾಡುತಿದೆ ನನ್ನ ತನುವು....

ರೇಷಿಮೆಯ ಕಾಂತಿ ನಿನ್ನ ಹೊಳಪು ಕೇಶವು
 ಬಾವ ತರಂಗದಿ ಕಂಪಿಸಿದೆ ನನ್ನ ಮನವು.... 

ಮೀನ ದೇಹದಾಟವು ನಿನ್ನ ಚಂಚಲ ನಯನವು   
 ಕಪ್ಪೆಚಿಪ್ಪ ಮುತ್ತಂತೆ ಅರಳಿದೆ ನನ್ನ ಮಧುರ ಪ್ರೇಮವು....  

 ನೋಡಿ ನಿನ್ನ ಕವಿಯಾದೆನು
 ಕಲೆಯ ರಸದ ಭಲೆಯಲಿ ಸೆರೆಯಾದೆನು. .....                         
 
                                                  ಕಿರಣ್ ಆತ್ರೇಯ....













Wednesday, June 17, 2015

ಇಲ್ಲದಂತಾಗಿದೆ...

ಗೆಳತಿ. ..


ಇಂದೇಕೋ ಮನಸ್ಸು
ಭಗ್ನವಾದಂತ  
ಅವಶೇಷವು ಇಲ್ಲದಂತ   
 ಪ್ರೇಮಿಯಂತಾಗಿದೆ.....

ಕನಸುಗಳ ಹುಂಬಿಲ್ಲದೆ
  ಆಮಿಷ ಗಳ  ತ್ತ್ಯಾಜ್ಯ ಪರಿಕರವಿಲ್ಲದೆ 
 ಏಕಾಂಗಿಯಂತಾಗಿದೆ
 ನಿನ್ನ ನೆನಪಲ್ಲಿ..

ಕಂಡರು ನಿನ್ನ ಕಾಣದಂತೆ,
ನಟಿಸುವ ಹುಂಬತನ....
ಆಲಿಸಿದರೆ ನಿನ್ನ ದನಿಯಂತೆ,
  ಮಾತನಾಡಿಸದ ಜಂಬತನ..

 ಸ್ನೇಹದ ಪರಿಧಿಯ ಮೀರಿದರೆ
ಪ್ರೇಮದ ಅಪರಿಮಿತೆ ಕಾಡುತ್ತದೆ. .
 ಸ್ನೇಹಕ್ಕೋ ಆಯ ತಪ್ಪಿ
   ಪ್ರೇಮ ನಿರ್ಜೀವ ವಾಗುತ್ತದೆ.. 
 ಯೋಚಿಸಿದರೆ ನನ್ನ ಮನಸ್ಸು
 ತೀವ್ರ ತರ್ಕಕ್ಕೆ ಒಡ್ಡತ್ತದೆ.. 

ಸ್ನೇಹದ ಛಾಯೆ ಸಾಕಲ್ಲವೇ
  ನಿನ್ನ ಪ್ರೀತಿಸಲಿಕ್ಕೆ...
ಎಂತಾದರು ಸಾಧ್ಯವೇ
 ನಿನ್ನ ಮರೆಯಲಿಕ್ಕೆ.....

ಗೆಳತಿ 
ಇಂದೇಕೋ ಮನಸ್ಸು
 ಭಗ್ನವಾದಂತಾಗಿದೆ..
 ನನ್ನ ಅವ ಶೇಷವು  
ಇಲ್ಲದಂತಾಗಿದೆ....  

                          ಕಿರಣ್ ಆತ್ರೇಯ್. ...































































Sunday, June 14, 2015

ಕನಸು. ..

ಕನಸು. ..

ನನ್ನ ಸ್ಮೃತಿಗೆ
ನೆನಪಾಗಲಾರದ
ಮರೆಯಲೂ ಆಗದ
ಗೆಳತನದ ಅನುಭವ
ಬಂದು ಕೊನೆಗೆ ಅರ್ಥವೂ ಆಗದ
 ಧರ್ಮ ಸಂಕಟವುಂಟಾಗಿ
ಸ್ವಲ್ಪ ಜಂಭ ಬಂದು
ಗೆಳತನದ ನೆನಪೇ ಇಲ್ಲದಂಥಾಯಿತು.                                                       ಕಿರಣ್ ಆತ್ರೇಯ್. ..





ಮನೆಗೆ ಬಾರಲಿಲ್ಲವಲ್ಲಾ ಕೃಷ್ಣ....



ಮನೆಗೆ ಬಾರಲಿಲ್ಲವಲ್ಲಾ ಇಷ್ಟೊತ್ತಾದರು ನನ್ನ ಪುಟ್ಟ ಕೃಷ್ಣ
ಸಂಜೆ ಕತ್ತಲು ಕವಿಯುತಿಹುದು ಜಗಕೆ ನೆರಳು ಹಾಸುತಿಹುದು
ಹೇಳೆ ಗೋಪಿ ಎಲ್ಲಿ ಹೋದನೆ ? ಏನು ಮಾಡುತಿಹನೆ ? ಮನೆಗೆ ಬಾರಲಿಲ್ಲವಲ್ಲ ನನ್ನ ಮುದ್ದು ಕೃಷ್ಣ ||

ಧನಕರುಗಳ ಸಾಲು ಹಿಂತಿರುಗಿ ಬರುತಿದೆ
ಹಕ್ಕಿಗಳ ಸಾಲು ಮೆಲ್ಲನೆ ಗೂಡು ಸೇರುತಿದೆ
ಗೋಧೂಳಿಯ ಕಣ ಮೇಲಕೆ ಹಾರಿ
 ಶುಭ ಸಂಜೆಗೆ ಪತ್ರವ ಬರಿಯುತಿದೆ ||

 ತನ್ನ ಗೆಳೆಯರೊಡನೆ ಕೂಡಿ ಯಾರ
 ಮನೆಗೆ ಹೋಗಿಹನೇ ಬೆಣ್ಣೆಯನ್ನ ಕದಿಯಲು
 ತನ್ನ ಕರುಗಳೊಡನೆ ಆಡಿ ಯಾವ
ಸ್ಠಳದಿ ಕುಳಿತಿಹನೇ ಕೊಳಲನ್ನ ನುಡಿಸಲು

ಹೇಳೆ ಗೋಪಿ ಎಲ್ಲಿ ಹೋದನೆ ? ಏನು ಮಾಡುತಿಹನೆ ?
ಮನೆಗೆ ಬಾರಲಿಲ್ಲವಲ್ಲ ನನ್ನ ಮುದ್ದು ಕೃಷ್ಣ||      

ಕಿರಣ್ ಆತ್ರೇಯ್...















ಕವಿತೆ. .

ಕವಿತೆ. ..

 ಹೇ ಕವಿತೆ
ತೊರೆಯದಿರು
 ಈ ಕವಿ ಯ.. 
ಮರೆಯದಿರು
 ಈ ಮುನಿ ಯ..

ರಸ ದೀವಿಗೆ
ತುಂಬುವುದು ಜಗವ..
ನಿನ್ನ ಸ್ನೇಹ
ಬೆಳಗುವುದು ಮನವ..

ಇರಲಿ ಶಾರದೆಯ
ಸಾನಿಧ್ಯ.
ನನ್ನ ತನುವೆ
ನಿನಗೆ ನೈವೇದ್ಯ. .

ನೀನು ಕೈ ಹಿಡಿದರೆ
ತಾಳುವುದು ಈ ಜೀವ. .
ನೀನು ಕೈ ಬಿಟ್ಟರೆ
ಸಾಯುವುದು ಕವಿಯ ಜೀವ.               
                        
                        ಕಿರಣ್ ಆತ್ರೇಯ. ..