Thursday, October 12, 2017

ಕನಸುಗಳು..

ಪ್ರೀತಿಯಿಂದ ಕಟ್ಟಿದ
     ಕನಸುಗಳು ಭಗ್ನವಾಗುವುದಿಲ್ಲ..
   ಅವು ಸದಾಕಾಲ ನಮ್ಮನ್ನ
                ಕಾಯುತ್ತವೆ....
      ಜೀವಂತವಾಗಿರುವಂತೆ...

     ಮತ್ತೋಂದಷ್ಟು ಕನಸುಗಳಿಗೆ
         ‌     ಸ್ಪೂರ್ತಿ ಆಗುತ್ತವೆ..
         ಕೋಂಡಿಯಾಗಿ 
                ಆಸರೆಯಾಗುತ್ತವೆ
           ಮತ್ತಷ್ಟು ಕನಸುಗಳಿಗೆ....
  
                                 ಕಿರಣ್ ಆತ್ರೇಯ..

Friday, August 18, 2017

ಸುಮ್ನೆ ಪ್ರೀತ್ಸಿ....

ನೀನು ದ್ವೇಷಿಸಲೇ ಬೇಕೆಂದು ಹೋರಟಿದ್ದಿಯೇ
ಸಣ್ಣ ತಪ್ಪುಗಳು ಬೆಟ್ಟದಂತೆ ಕಾಣುತ್ತವೆ...
ನೀನು ಪ್ರೀತಿಸಲೇ ಬೇಕೆಂದು ಪಣತೋಟ್ಟಿದ್ದರೆ
ತಪ್ಪು ಒಪ್ಪುಗಳಿಗೆ ಜಾಗವೇ ಇರುತ್ತಿರಲಿಲ್ಲ...
      
      ನೀನು ಅವನನ್ನ ಪ್ರೀತಿಸುತ್ತಿದ್ದೀಯವೆಂದರೆ
     ಅವನ ಆದರ್ಶ ತತ್ವಗಳನ್ನ ಒಪ್ಪಿಕೋಳ್ಳಲೇ              
                                              ಬೇಕೆಂದೇನಿಲ್ಲ...
     ನೀನು ಅವನ ಆದರ್ಶಗಳನ್ನ ಒಪ್ಪಿಕೋಂಡ
     ಮಾತ್ರಕ್ಕೆ ಅವನನ್ನ ಪ್ರೀತಿಸುತ್ತಿರುವೆ ಎಂದೇನಿಲ್ಲ...

ಅವನ ಪ್ರೀತಿಯನ್ನ ನೀನು  ತತ್ವಜ್ಞಾನಿಯಂತೆ
  ನೋಡಿದ್ದರೆ ಚರ್ಚಿಸಲಿಕ್ಕೆ ಸಾಕಷ್ಟಿರುತಿತ್ತು..
ತನ್ನ ಸ್ನೇಹವನ್ನ ಹೆಚ್ಚು ಖಚಿತಗೋಳಿಸಿದ್ದಾನೆಂದರೆ
ಅದು ನಿನ್ನ  ಪ್ರೀತಿಸುವುದಲ್ಲದೆ ಮತ್ತೇನಿರುತಿತ್ತು..
  
                                 Kiran Athrey

Thursday, July 13, 2017

#ಕವಿ

ಕವಿ
ಮತ್ತೆ ಮತ್ತೆ ಹುಟ್ಟಿ
ಸಾಯ್ತಾನೆ..
ತನ್ನ ಕವಿತೆಗಳಲ್ಲಿ..

ಮತ್ತೆ ಮತ್ತೆ ಆಡ್ತಾನೆ
ಪ್ರೇಮದ ಗೀತೆಯನ್ನ
ಕೆಲವೋಮ್ಮೆ ವಿರಹದ
          ಗೀತೆಯನ್ನ...

ಈ ಯುಗ
   ಮುಗಿಯುವ ತನಕ
ಮತ್ತೆ ಮತ್ತೆ ಹುಟ್ಟಿ
  ಸಾಯುವ ತನಕ....
    
                 Kiran Athrey

Thursday, June 29, 2017

ಪರಿಸರದ ಅಧ್ಯಾಯ...

ಕೆಲಸವಿಲ್ಲದೆ ಊರಿಗೆ ಬಂದ ಗುಂಡ
ಜಾಗತಿಕ ತಾಪಮಾನ ಏರಿತ್ತು
ಗುಂಡನ ನೆತ್ತಿಯ ಮೇಲು ಕೋಪವಿತ್ತು..
ಅಷ್ಟು ಇಷ್ಟು ಕೂಡಿಟ್ಟ ದುಡ್ಡನ್ನ ಗಂಟಿಕ್ಕಿದ
ಹೊರಟೇ ಬಿಟ್ಟ ಕೃಷಿ ವಿಧ್ಯಾಲಯದ ಕಡೆಗೆ
ಮರ ಗಿಡಗಳಲ್ಲಿ ಅದೆಷ್ಟು ಬಗೆ
ಎಲ್ಲಾ ಬಗೆಯ ಬೀಜಗಳನ್ನ ಆರಿಸಿಕೊಂಡ.
ಒಂದಷ್ಟು ಕವರ್ಗಳೊಂದಿಗೆ
ಊರಿಗೆ ಬಂದೇ ಬಿಟ್ಟ..

ಭೂತಾಯಿ ಎಷ್ಟು ಬೇಕಾದರೂ
ಕೊಡುವಳು ಪ್ರೀತಿ.
ಬಗೆಬಗೆಯ ಖಾಧ್ಯಗಳನ್ನ
ತಾಯಿ  ಮನೆ ಮಂದಿಗೆಲ್ಲಾ
ಬೇಸಾಕುವ ರೀತಿ...
ಕವರ್ ಗಳಿಗೆ ಮಣ್ಣು ತುಂಬಿದ
ಬೀಜವನ್ನ ಹೂಣಿದ, ನೀರನ್ನ ಬಡಿಸಿದ
ದಿನಗಳು ಕಳೆದಂತೆ
ಶಿವನ ಶಾಂತ ಕಣ್ಣು ಬಿಟ್ಟಂತೆ
ಹಸಿರಿನ ಬುಗ್ಗೆ ಗಿಡವಾಗಿ
ಕವರ್ನಲ್ಲಿ ಬೆಳೆದೇ ಬಿಟ್ಟಿತು..
ಗುದ್ದಲಿ ಸಲಾಕೆ ಇಡಿದ
ಹಳ್ಳಿಯ ಸುತ್ತ ಬರುಡಾಗಿದನ್ನ ನೋಡಿದ
ಗಿಡ ನೆಡುವ ಕಾಮಗಾರಿಯನ್ನ
ಆರಂಭಿಸಿಯೇ  ಬಿಟ್ಟ. ..
ಹಳ್ಳಿ ಮಂದಿ ನೋಡಿದರು
ಬೇರೇ ಕ್ಯಾಮೆ ಇಲ್ಲ ಎಂದು ಜರಿದರು..

ದಿನಗಳು ಉರುಳಿದಂತೆ
ಬರುಡಾಗಿದ್ದ ನೆಲದಲ್ಲಿ
ಮರ ಗಿಡಗಳು ದಾಂಪತ್ಯ ನೆಡೆಸಿದವು
ಹಚ್ಚ ಹಸಿರಿನಿಂದ ಸ್ವರ್ಗವಾಯಿತು ಹಳ್ಳಿ..
ಜರಿದ ಮಂದಿ ಗುಂಡನ
ಕೆಲಸವನ್ನ ಒಪ್ಪಿಕೊಂಡರು
ಹಾಗೆ ಅಪ್ಪಿಕೊಂಡರು...

(ಇಲ್ಲಿಗೆ ಅಧ್ಯಾಯ ಸಮಾಪ್ತಿ
ಕೇಳಿದವರಿಗೆ ಓದಿದವರಿಗೆ
ಗಿಡ ನೆಡುವ ಬುದ್ಧಿ ಬರಲಿ
ಎಲ್ಲಾ ಕಡೆ ಹಸಿರು ಬೆಳೆಯಲಿ
ಕಾಲಕಾಲಕ್ಕೆ ಮಳೆಯಾಗಲಿ
ಬೆಳೆಯ ಬೆಳೆವ ರೈತ ಸುಖವಾಗಿರಲಿ
ಜೈ ಪ್ರಕೃತಿ ಮಾತೆ..)

                  Kiran Athrey

Tuesday, June 20, 2017

ನೀನೇ...

 

ನಿನ್ನಂತೆ ನಟಿಸುವೆನು 
          ಒಮ್ಮೊಮ್ಮೆ
ನೀನ್ನನ್ನೆ ಅನುಕರಿಸುವೆ
           ಮತ್ತೊಮ್ಮೆ..
ನೀ ನುಡಿದದ್ದೆಲ್ಲವು
ಕೊರೆವ ಚಳಿಯಲೂ
  ಹೃದಯದಲ್ಲಿ ಬೆಚ್ಚಗೆ
          ಹಸಿರಾಗಿದೆ..
ಕಳೆದ ಕ್ಷಣಗಳು ನೆನಪಾಗಿ 
   ಸದಾ ಅರಳುತಿದೆ..
ದೇಹ ಬಾಡ ಬಹುದು
   ಉಸಿರು ನಿಲ್ಲ ಬಹುದು..
ಹುಟ್ಟುವ ನೆನಪಿಗೆ
    ಮತ್ತೆ ಮತ್ತೆ ಆಯುಷ್ಯ
   ಹೆಚ್ಚುತಿದೆ..

         

Saturday, May 20, 2017

#ಕನ್ನಡಿಗರೇ ನಮಗಿದು ದೊಡ್ಡ ಸವಾಲ್..

#ಕನ್ನಡಿಗರೇ ನಮಗಿದು ದೊಡ್ಡ #ಸವಾಲ್...!!!
   ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಕನ್ನಡಕ್ಕೆ ಬಂದಿದ್ದು ಸರಸ್ವತಿ  ಪುತ್ರರಿಗೆ ಏನು ಬರ ಇಲ್ಲ. . ಓದೋ ಅಭ್ಯಾಸ ಕಮ್ಮಿ ಆಗ್ತಾ ಇರೋ ಈ ಕಾಲದಲ್ಲಿ..
   ಒಂದು ಭಾಷೆ, ನಾಡು, ಸಂಸ್ಕೃತಿ, ಅಲ್ಲಿನ ಸೃಜನಶೀಲತೆ ಯನ್ನ ಹೆಚ್ಚು ಪ್ರತಿಬಿಂಬುಸ್ತಾ ಇರೋದು ಚಿತ್ರರಂಗ.. ನಾಡು ನುಡಿ ಯನ್ನು ಹೆಮ್ಮೆಯಿಂದ ಮೆರುಸ್ತಾ ಇರೊರು ಕಲಾವಿದರು.. ಆದರೆ ನಾವುಗಳು ಕಲಾವಿದರನ್ನ ಕಲಾವಿದರಾಗಿ ನೋಡದೇ ಇವ ನಮ್ಮ ಹೀರೋ,  ಅವ ನಿಮ್ಮ ಹೀರೋ ಇವನೇ great ಅವನು ನಾಲಾಯಕ್ ಈ ರೀತಿ ನಮ್ಮಲ್ಲೆ ನಾವು  ದ್ವೇಷವನ್ನ ಮಾಡ್ಕೋಳೋದು ನಿಜಕ್ಕೂ ನಾಚಿಕೆಗೇಡು..
      ಕಲಾವಿದರನ್ನ ಅವರ ಪ್ರತಿಭೆ ಇಂದ ಗುರುತಿಸೋದಕ್ಕಿಂತ ನಾವೇ ಪಕ್ಷವನ್ನಾಗಿ ಮಾಡ್ಕೋಂಡಿರೋದು ವಿಷಾದನೀಯ ಸಂಗತಿ.. ಬೇರೆ ಭಾಷೆಯ cinemaಗಳ ಅನುಕರಣೇಗಿಂತ ಹೆಚ್ಚು ಅವಶ್ಯಕತೆ ಇರೋದು ನಮ್ಮಲ್ಲಿನ ಸೃಜನಶೀಲತೆ ಯನ್ನ ಪ್ರದರ್ಶಿಸುವುದು.. ಜೊತೆಗೆ ಪೂರ್ವಪೂರ್ವಾಗ್ರಹ ಪೀಡಿತರಾಗದೇ ಪ್ರತಿಭೆ ಇರೋರನ್ನ ಮನಸ್ಪೂರ್ವಕವಾಗಿ ಒಪ್ಕೋಳ್ಳೋದು ನಮ್ಮ ಕರ್ತವ್ಯ ನು ಕೂಡ ಆಗಬೇಕಿದೆ... ಇಲ್ಲ ಅಂದರೆ 30 ವರ್ಷಗಳ ನಂತರ ಪ್ರತಿಭೆಯನ್ನ ಗುರುತಿಸೋ ಕಡೆ ಪ್ರತಿಭೆಗಳು ಮೆರೆಯುತ್ತೆ. ಮತ್ತೆ ಆಗ ನಾವು ಕನ್ನಡಿಗರಾಗಿ ಹುಟ್ಟಿ ಬೇರೆ ಭಾಷಿಗ ಅಂತ ಹೇಳ್ದಾಗ ಕನ್ನಡಿಗರಿಗೇ ಸ್ವಲ್ಪ acidity ಜಾಸ್ತಿ ಆಗುತ್ತೆ... ನಮ್ಮ ಭಾಷೆಯ ಕಲಾವಿದರನ್ನ ಪೂರ್ವಾಗ್ರಹ ಪೀಡಿತ ರಾಗದೆ ಪ್ರೀತಿಸೋದು ನಿಜಕ್ಕೂ ನಮಗೆ ದೊಡ್ಡ ಸವಾಲ್....!!!

                                   Kiran Athrey

Friday, April 14, 2017

Wanting the love of Divine..!!


Wanting the love of Divine..!!

The flower basking
In the field
To find her love with sun
But it would be fed-up in few hours..

The honey-Bee singing their
eternal song in  the flower ear
With chorus of gentle breeze..

Is it only a lust..?
Or
Is that blindness of love..?

But
The poet still searching,
wanting the love of divine
in permanent...
  
                         - Kiran Athrey