Tuesday, September 22, 2015

ಆಡಿದ ಮಾತಿಗೆ ಏಕೆ ಕೊರಗುವೆ....

ಗೆಳತಿ..
ಆಡಿದ ಮಾತಿಗೆ
ಏಕೆ ಕೊರಗುವೆ...
ಕೋಪದಲ್ಲಿ ಬಂದದಕ್ಕೆ
ಏಕೆ ಮರುಗುವೆ..
ಕೆಲವೊಮ್ಮೆ ನೇರವಾಗಿ
ಹೇಳುವುದು ಉಚಿತ..
ಧೀರ್ಘಕಾಲದ
ದ್ವೇಷ ಅನುಚಿತ..
ಆಡಿದ ಮಾತಿಂದ
ನಿನ್ನ ವ್ಯಕ್ತಿತ್ವಕ್ಕೆ
ಬಾರದು ಧಕ್ಕೆ..
ಅವಕಾಶವಾದಿಗಳು
ಎಲ್ಲದಕ್ಕೂ
ಹಾಕಬಹುದು ಕೊಕ್ಕೆ...
ಆಡಿದ ಮಾತಿಗೆ ವ್ಯಕ್ತಿತ್ವವನ್ನೆ
ಅಳೆಯುವುದು ಮೂರ್ಖತನ..
ಸಮಯ ಸಂದರ್ಭಕ್ಕೆ
ವರ್ತಿಸುವುದೇ ಜಾಣತನ...
ಪಶ್ಚಾತಾಪಕ್ಕೆ
ನಿನ್ನ ತಪ್ಪು ಏನೂ ಇಲ್ಲ...
ಮರುಕಕ್ಕೆ
ನಿನ್ನದು ತಪ್ಪೇಅಲ್ಲ....
      
               ಕಿರಣೋಕ್ತಿ....

ಪ್ರೇಮವೆಂದರೆ....

ಪ್ರೇಮವೆಂದರೆ..
ಸದಾ ಪ್ರೇಯಸಿಯದೆ ಧ್ಯಾನ...
ಮಾತೆ ಬರದ ಮೌನ..
ಮನಸಿನಾಲಯದಲಿ ಪ್ರೇಮ
ಚುಕ್ಕಿಯ ಆಟ..
ಹೃದಯಾಲಯದಲಿ ಅವಳ
ಬಡಿತದ ಓಟ..
ಚುಕ್ಕಿ ಎಣಿಸುತಿದೆ ನಮ್ಮ ಮೇಲೆ
ಚಂದ್ರನ ಪ್ರೇಮವೆಷ್ಟೆಂದು..
ಚಂದ್ರನು ಬೆಪ್ಪಾದ ನನ್ನ ಮೇಲೆ
ಇವರ ವ್ಯಾಮೋಹ ಎಷ್ಟೊಂದು..
ಚುಕ್ಕಿಚಂದ್ರಮರ ಆಟವ ನೋಡುತಿದೆ
ಪ್ರೇಮಿಗಳ ಹೃದಯ..
ಶಿವನ ಕೃಪೆಯ ಮಾಯೆಗೆ
ಎಲ್ಲವನ್ನು ಮರೆತಿದೆ
ಈ ಜಗದ ಹೃದಯ...
                 ಕಿರಣೋಕ್ತಿ....

ಗೆಳತಿ....

ನಿಜ ಹೇಳು ಗೆಳತಿ
ಯಾವ ರಸಿಕನ ಮನವ ತಣಿಸುವ
ಕಣ್ಣು ಕೋರೈಸುವ ರತ್ನ ನೀನು..
ಮುಷ್ಟಿ ಬಿಟ್ಟರೆ ಮನೆ ತುಂಬ
ಚೆಲ್ಲುವ ಮುತ್ತಿನ ಹನಿಯೇ ನೀನು...
ಕಾವ್ಯ ಕಲ್ಪಿಸುವ ನನ್ನ ಚಿತ್ತದ
ಪದಗಳನೆ ನಾಚಿಸುವ ಈ ಕವಿಯ
ಯಾವ ಜನ್ಮದ ಗೆಳತಿಯೇ ನೀನು...
ಸರಸತಿಯಿಂದ ಜನಿಸಿ, ಸೌಂದರ್ಯ
ಸೃಷ್ಟಿಸಿದ ದೇವ ಲೋಕದ ಮಾಯಗಾತಿಯೇ ನೀನು...
ನಿಜ ಹೇಳು ಗೆಳತಿ
ಯಾವ ರಸಿಕನ ಹೃದಯದಲ್ಲರಳಿದ
ಮಂದಾರ ಪುಷ್ಪದ
ಕೋಮಲಾಂಗಿಯು ನೀನು...
                            ಕಿರಣ್ ಆತ್ರೇಯ....

Sunday, September 20, 2015

ಸ್ಪೂರ್ತಿ....

ಗೆಳತಿ...
ನನ್ನ ಸ್ಫೂರ್ತಿ ಮಾತಿಗೆ
ನೀ ಏಕೆ ಕಾಯುವೆ.?
ಅನ್ಯರ ಪ್ರೋತ್ಸಾಹ ಎಷ್ಟು ದಿನ..?
ಅದು ಮಾತ್ರ ಅವರು ಇರುವಷ್ಟುದಿನ
ಸ್ವಯಂಬೆಳಗುವ
ಸೂರ್ಯ ಶಾಶ್ವತ...
ಕಿರಣವನ್ನ ಹೀರಿ
ಪ್ರತಿಫಲಿಸುವ ತುಂಬು
ಚಂದಿರನೆಂದೂ ಅಶಾಶ್ವತ..
ನೀನೇ ಕಂಡುಕೋ
ನಿನ್ನಲ್ಲಿನ ಸ್ಫೂರ್ತಿಯನ್ನ..
ನೀನೇ ಅಂಟಿಸು
ನಿನ್ನಲ್ಲಿನ ಜ್ಞಾನ ಜ್ಯೋತಿಯನ್ನ..
ಉರಿದು ಅನ್ಯರಿಗು ಚೇತನವಾಗಲಿ..
ತಮೋಭೀತಿ ಸುಟ್ಟು ಜಗವೇ
                    ಬೆಳಕಾಗಲಿ...
     
                     ಕಿರಣೋಕ್ತಿ....

ಒಂದು ದಿನ....

ನನ್ನ ignitor bykeನ ಮೇಲೇರಿ
 ಬೆಳೆಸಿದಾಗ ಎತ್ತಲೋ ಸವಾರಿ..

Bus ಗೆ ಕಾಯುತ್ತ ನಿಂತ ಚೆಲುವೆಯ
 ಬೆಡಗು ಬಿನ್ನಾಣಕ್ಕೆ ಅನುರಾಗವರಳಿ
 ಮನಸ್ಸು ಸೋತಿತೋ..
ಯಾವ ಸೆಳೆತವೋ,
ಯಾವ ಮಾಯೆಯೋ. 
ನನ್ನ ಮನಸ್ಸು ಅವಳಿಗೆ
 ವಶವಾಯಿತೋ.. 

ಜನಗಳ ಸಂತೆ, ನೋಡುತ ನಿಂತೆ,
 ಅವಳದೇ ಚಿಂತೆ.. 
Bus ಹತ್ತಿ ಹೊರಟೇ ಹೋದಳು..
ನೋಡು ನೋಡುತಿದ್ದಂತೆ
ಮಾಯವಾದಳು..
ಒಂದು ಕ್ಷಣಕ್ಕೆ
 ಪ್ರೇಮವಾಯಿತೊ
ಇಲ್ಲ ದಿಗಿಲಾಯಿತೊ..
ತೋಚದಷ್ಟು ಚಿಂತೆ ಮನದಾಳದಲ್ಲಿ..
ನನ್ನ ಹೃದಯದ ಅಲಗೆಯಲಿ..
ಶುರುವಾಯಿತು ಒಲವಿನ ಕಾರುಬಾರು... 
ಹಣೆಕಟ್ಟಿಲ್ಲದೆ ಹರಿಯಿತು
ಪ್ರೀತಿಯ ನೀರು... 
ಈ ಮಾಯೆ ನಿಲ್ಲಲು
ಕುಡಿಯಬೇಕೆ ಬಿಯರು.? 
ಎಷ್ಟು ಕುಡಿದರು ಅವಳದೇ ನಶೆ..
 ನಮ್ಮಮ್ಮನಿಗೆ ಆಗಬಹುದೆ
ಸರಿಯಾದ ಸೊಸೆ.. 

ಅವಳ ವಿಳಾಸವ ಬಲ್ಲವರ್ಯಾರು.. ?
ಮತ್ತೊಮ್ಮೆ ಸಿಗಬಹುದೇ
ಭವಿಷ್ಯವನ್ನ ಅರಿತವರ್ಯಾರು. ?

ಗಣಿಯ ಸೌಂದರ್ಯದಾಕೃತಿಗೆ
ಪ್ರೇಮದ ಶಾವಿಗೆ ಅನ್ನ ಬಹುದೇ.?
ನಿಂತ ಚೆಲುವಿನಾಕೃತಿಗೆ
ಪ್ರೀತಿಯ ಬುಗ್ಗೆ ಮೂಡಬಹುದೇ.?

ಮತ್ತದೇ ಕ್ಷಣಕ್ಕೆ
 ಪ್ರೇಮವಾಯಿತೊ..
ಇಲ್ಲ ದಿಗಿಲಾಯಿತೊ...
ಭ್ರಮೆಗೊಂಡೆ, ಕಸಿವಿಸಿಗೊಂಡೆ..
ಭ್ರಮೆಯಲ್ಲಿ ಪ್ರೇಮಮುಗಿಯಿತು..
ಪ್ರೇಮದಲ್ಲಿ ಭ್ರಮೆ ಆರಂಭವಾಯಿತು..
ಅಷ್ಟರಲ್ಲಿ ನನ್ನ ಕವಿತೆಯೂ
                     ಮುಗಿಯಿತು...
                                      ಕಿರಣೋಕ್ತಿ....

Sunday, September 6, 2015

ಏನನ್ನಲೆ..

ಏನನ್ನಲೆ
ನಿನ್ನ ಏನನ್ನಲೆ...

ಭಾವದ ಕಾರಂಜಿಯಲಿ
ಹೊಮ್ಮಿ ಹರಿದವಳೆ..
ಜುಳು ಜುಳು ಅಲೆಯಲಿ
ರಸಜೀವ ತುಡಿದವಳೆ..

ತಿಳಿ ಆಗಸದಲಿ
ವಿಶಾಲತೆಯ ದೀರ್ಘತೆಯಲಿ
ಹಕ್ಕಿಯಂತೆ ಬಂದವಳೆ..
ವೇಣುವಿನಾದದ
ಅಣು ಅಣುವಿನಲಿ
ಶುಭ್ರತೆಯ ಭವ್ಯತೆಯಲಿ
ಪರಿಮಳವ ತಂದವಳೆ..

ಹದಿಹರೆಯದ
ಮನಸ್ಸಿನ ಮಾತಾಗಿ..
ಒಲವಿನ ಪ್ರಣಯದ
ಲತೆಯಾಗಿ..
ನನ್ನ ಮನದ
ಕಲ್ಪನೆಯಾಗಿ..
ಪದವಾಗಿ ಬಂದವಳೆ
ಬಂದು ನನ್ನಲ್ಲೆ ನಿಂತವಳೆ

ಏನನ್ನಲೆ ನಿನ್ನ ಏನನ್ನಲೆ,
ಹೆಣ್ಣೆನ್ನಲೆ..
ಅಥವಾ ಕವಿತೆಯೆನ್ನಲೆ..!!

                    ಕಿರಣ್ ಆತ್ರೇಯ್....

.......

ಗೆಳತಿ..,
ಇಪ್ಪತ್ತೈದು ಕಳೆದೇ
ಹೋಯಿತು.
ನನ್ನ ಅಸ್ತಿತ್ವವಕ್ಕೆ..
ನಿತ್ಯ ಬದುಕೇ
ಕನಸಾಯಿತು.
ಈಗಿನ ವರ್ತಮಾನಕ್ಕೆ..

ನಾಳೆಯ ನಿತ್ಯ ನೂತನಕ್ಕೆ
ಇಂದೇ ಬರೆಯಬೇಕು ಭಾಷ್ಯ...
ನಾವು ಅಂದುಕೊಂಡದ್ದು
ಆಗದಿರುವುದೇ ಮುಂದಿನ ಭವಿಷ್ಯ...

ಕಷ್ಟದ ನಂತರ
ಸುಖ ಸಾಮಾನ್ಯ..
ಗೆಲುವಿನ ನಂತರದ
ಸೋಲು ಅದಮ್ಯ. .

ಸಮುದ್ರ ಮಂಥನದಲ್ಲಿ
ವಾಸುಕಿಯ ನರಳಿನಾಕ್ರೋಷದಲ್ಲಿ.
ವಿಷವೇ ಆದದ್ದು ಅಮೃತ...
ಜೀವನ ಜಾತ್ರೆಯಲ್ಲಿ
ದೇಹನ ಮೆರವಣಿಗೆಯಲ್ಲಿ
ನಂಬಿಕೆಯೇ ಉಸಿರಾಗಬೇಕು
                 ಅನವರತ...

ಈ ಸುಖದುಃಖದಲಿ
ನನ್ನ ಅಸ್ತಿತ್ವವಕ್ಕೆ.
ನನ್ನ ಉದರ ನಿಮಿತ್ತಕ್ಕೆ..
ನಿತ್ಯ ಕರ್ಮಾನುಷ್ಟಾನವೊಂದೇ..
ಅದು ಶ್ರದ್ಧೆಯಲಿ, ಬದ್ಧತೆಯಲಿ,
ಇಲ್ಲ ನಿನ್ನ ಆಗಮನದ
                      ನಿರೀಕ್ಷೆಯಲಿ...
  
                       ಕಿರಣ್ ಆತ್ರೇಯ್....

Thursday, September 3, 2015

ವಿಪರ್ಯಾಸ

ಗೆಳತಿ....

ಆದ ಅನುಭವಗಳು
ಕಂಡ ಕನಸುಗಳು
ಹೃದಯಕ್ಕಪ್ಪಳಿಸುತ್ತದೆ.
ಪದೇ ಪದೇ ಮರುಕಳಿಸುತ್ತದೆ.
ಬಾವನಾತ್ಮಕತೆಗೆ ಒಡ್ಡುತ್ತದೆ.
ಮುಚ್ಚಿಡಲು ಆಗದೆ
ಬಚ್ಚಿಡಲು ಆಗದೆ
ಸೂಕ್ಷ್ಮಾನುಸೂಕ್ಷ್ಮವಾಗಿ
                    ಕಾಡುತ್ತದೆ.
ಬಗೆಬಗೆ ತರಕಾರಿಗಳಂತೆ
ಮನದ ಮಳಿಗೆಯ ತುಂಬ
ಕಂಡದ್ದು,  ಕೇಳಿದ್ದು,
ಎಲ್ಲವೂ ಬೀಡು ಬಿಟ್ಟಿದೆ....
ಮಿತವಾಗಿ ಗೂಡು ಕಟ್ಟಿದೆ...

        (ಎಂಥಾ ವಿಪರ್ಯಾಸ.)