Thursday, June 29, 2017

ಪರಿಸರದ ಅಧ್ಯಾಯ...

ಕೆಲಸವಿಲ್ಲದೆ ಊರಿಗೆ ಬಂದ ಗುಂಡ
ಜಾಗತಿಕ ತಾಪಮಾನ ಏರಿತ್ತು
ಗುಂಡನ ನೆತ್ತಿಯ ಮೇಲು ಕೋಪವಿತ್ತು..
ಅಷ್ಟು ಇಷ್ಟು ಕೂಡಿಟ್ಟ ದುಡ್ಡನ್ನ ಗಂಟಿಕ್ಕಿದ
ಹೊರಟೇ ಬಿಟ್ಟ ಕೃಷಿ ವಿಧ್ಯಾಲಯದ ಕಡೆಗೆ
ಮರ ಗಿಡಗಳಲ್ಲಿ ಅದೆಷ್ಟು ಬಗೆ
ಎಲ್ಲಾ ಬಗೆಯ ಬೀಜಗಳನ್ನ ಆರಿಸಿಕೊಂಡ.
ಒಂದಷ್ಟು ಕವರ್ಗಳೊಂದಿಗೆ
ಊರಿಗೆ ಬಂದೇ ಬಿಟ್ಟ..

ಭೂತಾಯಿ ಎಷ್ಟು ಬೇಕಾದರೂ
ಕೊಡುವಳು ಪ್ರೀತಿ.
ಬಗೆಬಗೆಯ ಖಾಧ್ಯಗಳನ್ನ
ತಾಯಿ  ಮನೆ ಮಂದಿಗೆಲ್ಲಾ
ಬೇಸಾಕುವ ರೀತಿ...
ಕವರ್ ಗಳಿಗೆ ಮಣ್ಣು ತುಂಬಿದ
ಬೀಜವನ್ನ ಹೂಣಿದ, ನೀರನ್ನ ಬಡಿಸಿದ
ದಿನಗಳು ಕಳೆದಂತೆ
ಶಿವನ ಶಾಂತ ಕಣ್ಣು ಬಿಟ್ಟಂತೆ
ಹಸಿರಿನ ಬುಗ್ಗೆ ಗಿಡವಾಗಿ
ಕವರ್ನಲ್ಲಿ ಬೆಳೆದೇ ಬಿಟ್ಟಿತು..
ಗುದ್ದಲಿ ಸಲಾಕೆ ಇಡಿದ
ಹಳ್ಳಿಯ ಸುತ್ತ ಬರುಡಾಗಿದನ್ನ ನೋಡಿದ
ಗಿಡ ನೆಡುವ ಕಾಮಗಾರಿಯನ್ನ
ಆರಂಭಿಸಿಯೇ  ಬಿಟ್ಟ. ..
ಹಳ್ಳಿ ಮಂದಿ ನೋಡಿದರು
ಬೇರೇ ಕ್ಯಾಮೆ ಇಲ್ಲ ಎಂದು ಜರಿದರು..

ದಿನಗಳು ಉರುಳಿದಂತೆ
ಬರುಡಾಗಿದ್ದ ನೆಲದಲ್ಲಿ
ಮರ ಗಿಡಗಳು ದಾಂಪತ್ಯ ನೆಡೆಸಿದವು
ಹಚ್ಚ ಹಸಿರಿನಿಂದ ಸ್ವರ್ಗವಾಯಿತು ಹಳ್ಳಿ..
ಜರಿದ ಮಂದಿ ಗುಂಡನ
ಕೆಲಸವನ್ನ ಒಪ್ಪಿಕೊಂಡರು
ಹಾಗೆ ಅಪ್ಪಿಕೊಂಡರು...

(ಇಲ್ಲಿಗೆ ಅಧ್ಯಾಯ ಸಮಾಪ್ತಿ
ಕೇಳಿದವರಿಗೆ ಓದಿದವರಿಗೆ
ಗಿಡ ನೆಡುವ ಬುದ್ಧಿ ಬರಲಿ
ಎಲ್ಲಾ ಕಡೆ ಹಸಿರು ಬೆಳೆಯಲಿ
ಕಾಲಕಾಲಕ್ಕೆ ಮಳೆಯಾಗಲಿ
ಬೆಳೆಯ ಬೆಳೆವ ರೈತ ಸುಖವಾಗಿರಲಿ
ಜೈ ಪ್ರಕೃತಿ ಮಾತೆ..)

                  Kiran Athrey

No comments:

Post a Comment