ನೀನು ದ್ವೇಷಿಸಲೇ ಬೇಕೆಂದು ಹೋರಟಿದ್ದಿಯೇ
ಸಣ್ಣ ತಪ್ಪುಗಳು ಬೆಟ್ಟದಂತೆ ಕಾಣುತ್ತವೆ...
ನೀನು ಪ್ರೀತಿಸಲೇ ಬೇಕೆಂದು ಪಣತೋಟ್ಟಿದ್ದರೆ
ತಪ್ಪು ಒಪ್ಪುಗಳಿಗೆ ಜಾಗವೇ ಇರುತ್ತಿರಲಿಲ್ಲ...
ನೀನು ಅವನನ್ನ ಪ್ರೀತಿಸುತ್ತಿದ್ದೀಯವೆಂದರೆ
ಅವನ ಆದರ್ಶ ತತ್ವಗಳನ್ನ ಒಪ್ಪಿಕೋಳ್ಳಲೇ
ಬೇಕೆಂದೇನಿಲ್ಲ...
ನೀನು ಅವನ ಆದರ್ಶಗಳನ್ನ ಒಪ್ಪಿಕೋಂಡ
ಮಾತ್ರಕ್ಕೆ ಅವನನ್ನ ಪ್ರೀತಿಸುತ್ತಿರುವೆ ಎಂದೇನಿಲ್ಲ...
ಅವನ ಪ್ರೀತಿಯನ್ನ ನೀನು ತತ್ವಜ್ಞಾನಿಯಂತೆ
ನೋಡಿದ್ದರೆ ಚರ್ಚಿಸಲಿಕ್ಕೆ ಸಾಕಷ್ಟಿರುತಿತ್ತು..
ತನ್ನ ಸ್ನೇಹವನ್ನ ಹೆಚ್ಚು ಖಚಿತಗೋಳಿಸಿದ್ದಾನೆಂದರೆ
ಅದು ನಿನ್ನ ಪ್ರೀತಿಸುವುದಲ್ಲದೆ ಮತ್ತೇನಿರುತಿತ್ತು..
Kiran Athrey
No comments:
Post a Comment