ಮನೆಗೆ ಬಾರಲಿಲ್ಲವಲ್ಲಾ ಇಷ್ಟೊತ್ತಾದರು ನನ್ನ ಪುಟ್ಟ ಕೃಷ್ಣ
ಸಂಜೆ ಕತ್ತಲು ಕವಿಯುತಿಹುದು ಜಗಕೆ ನೆರಳು ಹಾಸುತಿಹುದು
ಹೇಳೆ ಗೋಪಿ ಎಲ್ಲಿ ಹೋದನೆ ? ಏನು ಮಾಡುತಿಹನೆ ? ಮನೆಗೆ ಬಾರಲಿಲ್ಲವಲ್ಲ ನನ್ನ ಮುದ್ದು ಕೃಷ್ಣ ||
ಧನಕರುಗಳ ಸಾಲು ಹಿಂತಿರುಗಿ ಬರುತಿದೆ
ಹಕ್ಕಿಗಳ ಸಾಲು ಮೆಲ್ಲನೆ ಗೂಡು ಸೇರುತಿದೆ
ಗೋಧೂಳಿಯ ಕಣ ಮೇಲಕೆ ಹಾರಿ
ಶುಭ ಸಂಜೆಗೆ ಪತ್ರವ ಬರಿಯುತಿದೆ ||
ತನ್ನ ಗೆಳೆಯರೊಡನೆ ಕೂಡಿ ಯಾರ
ಮನೆಗೆ ಹೋಗಿಹನೇ ಬೆಣ್ಣೆಯನ್ನ ಕದಿಯಲು
ತನ್ನ ಕರುಗಳೊಡನೆ ಆಡಿ ಯಾವ
ಸ್ಠಳದಿ ಕುಳಿತಿಹನೇ ಕೊಳಲನ್ನ ನುಡಿಸಲು
ಹೇಳೆ ಗೋಪಿ ಎಲ್ಲಿ ಹೋದನೆ ? ಏನು ಮಾಡುತಿಹನೆ ?
ಮನೆಗೆ ಬಾರಲಿಲ್ಲವಲ್ಲ ನನ್ನ ಮುದ್ದು ಕೃಷ್ಣ||
ಕಿರಣ್ ಆತ್ರೇಯ್...
No comments:
Post a Comment