Tuesday, July 21, 2015

ವ್ಯಥೆ...



ಬೀಳು ಬಿಟ್ಟಿದೆ
ಮನಸಿನ ತುಂಬ 75ರ 
 ಹರೆಯದ ಅಸಿ ನಿದ್ದೆ. ....
 
ಒಣಕಲು ಮರದ   
ರೆಂಬೆಯ ತುದಿಯಲಿ
 ಬಣ್ಣ ಬಣ್ಣದ ದಾರವ ಕಟ್ಟಿ  
 ಪ್ರಶ್ನೆಗಳಿಲ್ಲದ
ಉತ್ತರದಾಳೆಯ ಹಾರವ,
ನೇಣಿಗೆ ಹಾಕಿ..
ಭೂತದ ಕನಸನ್ನ ತಟ್ಟಿ
ತಪ್ತ ಬದುಕಿನ ಕಂದಕವ
 - ಕುಣಿಕೆಗೆ ಹಾಕಿ
ಕುಟ್ಟುತಿದ್ದಾಳೆ - ಮುದುಕಿ 
ಹರಿದ ಭಾವನೆಯ ತುದಿ ಇಡಿದು    
ನಿರರ್ಥಕ ಕಲ್ಪನೆಯ ಸಾಲನ್ನು ನೆನೆದು 
ಕೃಷ್ಣ, ಗೋವಿಂದ ಎಂದು
ಪಟಪಟ ಜಪಿಸುತ್ತಿದ್ದಾಳೆ  
ಸುಪ್ತ ಪ್ರಪಂಚದ ಅಮಾನವೀಯತೆಗೆ.. 
ಸರ್ವಸ್ವಾತಂತ್ರದ ಪಾರಮಾರ್ಥಕತೆಗೆ..
ಜೀವನದುದ್ದಕ್ಕು ಉಂಡ
ಗೊಂದಲದ ಖಾರ್ಮೋಡಗಳ                
                 -  ವ್ಯಥೆಗೆ....          
     
                           ಕಿರಣ್ ಆತ್ರೇಯ





















Sunday, July 19, 2015

ನಿನ್ನದೆ ನೆನಪಲ್ಲಿ

ನಿನ್ನದೆ ನೆನಪಲ್ಲಿ...

 ಒಂದು ಕ್ಷಣ ಮೌನಿಯಂತೆ
 ಕೂರಲು ನನ್ನ ಹಾರ್ಟ್
ಬಿಡುವುದೆ ಇಲ್ಲ....
ಪ್ರತಿ ಬಾರಿಯು
ಗಡಿಯಾರದ ಸೆಕೆಂಡ್
ಮುಳ್ಳಿನಂತೆ ಬಾರಿಸುತ್ತದೆ...
ನಿಮಿಷಕ್ಕೆ ಅದೆಷ್ಟು ಬಾರಿಯೋ...
ಪ್ರತಿ ಬಾರಿಯು
ನಿನ್ನ ಹೆಸರೇ ನುಡಿಸುತ್ತಿರುತ್ತದೆ...
ರಾಕೆಟ್ ಗಿಂತ ವೇಗವಾಗಿ
ಚಲಿಸುವ ರಕ್ತ ಕಣಗಳು
ನಿನ್ನ ಬಿಂಬವನ್ನೇ ರವಾನಿಸುತ್ತದೆ....
ನನ್ನ ಕಣ್ಣ ಮುಂದೆ ನಿನೇ ಇದ್ದಂತೆ....
ರೈಲು ಚೆಲಿಸುವಂತೆ
ನನ್ನ ಮೆದುಳು
ನಿನ್ನದೆ ನೆನಪಲ್ಲಿ ಓಡುತ್ತಿದೆ....

ಆದರೂ ಒಂದು ಕ್ಷಣ
 ಮೌನಿಯಂತೆ ಕೂರಲು
ಪ್ರಯತ್ನಿಸುತ್ತಿರುವೆ

ನಿನ್ನದೆ ನೆನಪಲ್ಲಿ...
ನಿನ್ನದೆ ಸದ್ದಿನಲ್ಲಿ...         

                           ಕಿರಣ್ ಆತ್ರೇಯ್

Wednesday, July 15, 2015

ನಾನೇ ಮರೆಯುವ ತನಕ..


ಗೆಳತಿ..

ನಿನ್ನ
ಮರೆಯಲೆಂದು ಹೊರಟೆ..
ಒಲ್ಲದ ಮನಸ್ಸಿನಿಂದ..
 ಹೃದಯವನ್ನು ಕಲ್ಲು ಮಾಡಿದೆ..
 ಪ್ರೀತಿಯನ್ನು ಗಂಟು ಕಟ್ಟಿದೆ..
 ಬಾವನೆಗಳ ಕುಟ್ಟಿ ಪುಡಿಮಾಡಿದೆ..
ನಿನ್ನ ನೆನಪ ನನ್ನ
ರಕ್ತದಲ್ಲಿ ಅಡಗಿಸಿದೆ..
ನನ್ನ ದಾರಿಯಲ್ಲಿ
 ನಿನ್ನ ನೆನಪು ಬಾರದಂತೆ..
ಆದರೂ ಮರೆಯುತ್ತೇನೆ
 ನಿನ್ನ ನೆಪದ ಛಾಯೆಯಲಿ.

ನನ್ನ ಅಸ್ತಿತ್ವವನ್ನ
 ನಾನೇ ಮರೆಯುವ ತನಕ..   
                               ಕಿರಣ್ ಆತ್ರೇಯ

Tuesday, July 14, 2015

ಗೆಳತಿ. ..


ಗೆಳತಿ. ..

ಅಪಾರದರ್ಶಕ ವಾದ   
ಈ ಪ್ರಪಂಚದಲ್ಲಿ,
ಮುಗ್ಧತೆಯನ್ನ ಹುಡುಕುವುದು
ಬಲು ಕಷ್ಟ. ..

 ಸತ್ಯ ಕೆಲವೊಮ್ಮೆ
 ಸುಳ್ಳಾಗುತ್ತದೆ..
 ಸುಳ್ಳು ಕೆಲವೊಮ್ಮೆ
ಸತ್ಯ ದಂತೆ ಕಾಣುತ್ತದೆ. .

 ಈ ಸತ್ಯಾಸತ್ಯದ
 ಅನ್ವೇಷಣೆಯಲಿ,
 ನಿನ್ನ ಮುಗ್ಧ ಪ್ರೀತಿಯನ್ನು
ಹುಡುಕುವ ಸನ್ಯಾಸಿಯಂತಾಗಿದೆ
 ನನ್ನ ಬದುಕು.....                                      
                             ಕಿರಣ್ ಆತ್ರೇಯ. ..