Wednesday, July 15, 2015

ನಾನೇ ಮರೆಯುವ ತನಕ..


ಗೆಳತಿ..

ನಿನ್ನ
ಮರೆಯಲೆಂದು ಹೊರಟೆ..
ಒಲ್ಲದ ಮನಸ್ಸಿನಿಂದ..
 ಹೃದಯವನ್ನು ಕಲ್ಲು ಮಾಡಿದೆ..
 ಪ್ರೀತಿಯನ್ನು ಗಂಟು ಕಟ್ಟಿದೆ..
 ಬಾವನೆಗಳ ಕುಟ್ಟಿ ಪುಡಿಮಾಡಿದೆ..
ನಿನ್ನ ನೆನಪ ನನ್ನ
ರಕ್ತದಲ್ಲಿ ಅಡಗಿಸಿದೆ..
ನನ್ನ ದಾರಿಯಲ್ಲಿ
 ನಿನ್ನ ನೆನಪು ಬಾರದಂತೆ..
ಆದರೂ ಮರೆಯುತ್ತೇನೆ
 ನಿನ್ನ ನೆಪದ ಛಾಯೆಯಲಿ.

ನನ್ನ ಅಸ್ತಿತ್ವವನ್ನ
 ನಾನೇ ಮರೆಯುವ ತನಕ..   
                               ಕಿರಣ್ ಆತ್ರೇಯ

2 comments:

  1. ಸುಂದರ ಸಾಲುಗಳು!
    "ಒರಟೆ" ಹಾಗು "ಹಡಗಿಸಿದೆ" ಮುದ್ರಣ ದೋಷವೇ ?

    ReplyDelete