Monday, August 31, 2015

ರಂಗವಲ್ಲಿ



ಗೆಳತಿ. .
  
  ರಂಗವಲ್ಲಿ ತುಂಬಿದ
  ನಿನ್ನ ಬೆರಳು ಹಿಡಿದು
  ಜೀವನದುದ್ದಕ್ಕೂ,
          ನಡೆಸಲೆ..

   ಚಿತ್ತದಲ್ಲಿ ತುಂಬಿದ,
        ನಿನ್ನ ಬಿಂಬದ
 ಮೂರ್ತಿಯನ್ನ ಸದಾ
ನನ್ನ ಹೃದಯದಲ್ಲಿಟ್ಟು
          ಆರಾಧಿಸಲೆ....

                                     ಕಕಿರಣ್ ಆತ್ರೇಯ್...

Monday, August 10, 2015

ನಿಶಾಚರ ಬದುಕು

 ಗೆಳತಿ!!!

ನಿಶಾಚರ ಬದುಕು                            
          ಸಾಕಾಗಿದೆ
ಭಾವಲಹರಿಯ ಸ್ಪಂದನ
         ಬೇಕೆನಿಸಿದೆ...

ಸರಿ ರಾತ್ರಿಯಲಿ
ನಭದ ಸೊಗಸೆ ಸುಂದರ
ತುಸು ಪ್ರೀತಿಯಲಿ
ನಿನ್ನ ನೆನೆಯುವ ಕಾತುರ...

ಜೋಂಪಿಡಿದ ಮನಸಿಗೆ
ತುಸು ತಲ್ಲಣ
ನಿದಿರೆ ಇಲ್ಲದ ಕನಸಿಗೆ
ನಿಶಯ ಅಮಲೇ ಉಲ್ಬಣ...

ಬದುಕು ಸವೆಯುತಿದೆ,
ಜೀವ ಹಿಂಡುತಿದೆ.
ನಾಲ್ಕು ಗೋಡೆಗಳ ಒಳಗೆ...
ಬುದ್ಧಿ ಮಂಕಾಗುತಿದೆ.
ಕಣ್ಣು ಮಿಟುಕುತಿದೆ.
ಚಷ್ಮದ ಒಳಗೆ...


ಬಹುರಾಷ್ಟ್ರದ ಗೆಳೆತನ
 ಕೆಲಸಕ್ಕಿಲ್ಲ ಕೊರತೆ
 ಬಹುಕೃತ ಖಾಸಗಿ ಒಡೆತನ
ದುಡಿಯುವುದೊಂದೆ ಒರತೆ...

ಆಗದಿರಲಿ ಜಾಗತಿಕ
ಆರ್ಥಿಕ ಅಪಸರಣ
ಕುಸಿಯದಿರಲಿ ಬದ್ಧತೆಯ
ಮನೆಮನದ ಆವರಣ...

 ಗೆಳತಿ
ಸಾಕಾಗಿದೆ ನಿಶಾಚರತೆ..
ಬೇಕಿದೆ ನಿನ್ನ ಪ್ರೀತಿಯ ಹಣತೆ...    





                               ಕಿರಣ್ ಆತ್ರೇಯ

Saturday, August 1, 2015

ಸ್ನೇಹ ಎಂದರೆ. ..

ಗೆಳತಿ. .

ಸ್ನೇಹದ ಕಲ್ಪನೆಯೇ ಹೀಗೆ.
ಅಭೂತಪೂರ್ವದ ಹಾಗೆ. .

ನಿಸ್ವಾರ್ಥದ
 ಪರಿಶುದ್ಧತೆಯಲ್ಲಿ..
 ಕಾಳಜಿಯ
 ಅಂತ:ಕರಣತೆಯಲ್ಲಿ..
ಸಾಗುವುದು ಇದರ ಯಾನ..
 ದಿಗಂತಕ್ಕೂ
 ಸೂರ್ಯ ಚಂದ್ರರ ತನಕ
 ಇದರ ಪ್ರ-ಯಾನ..

ಕರಗಲಾರದು
ಮುಗಿಯಲಾರದು
ಇದರ ಪಾರ...
ನೋವಿಗು
ನಲಿವಿಗು
ಇದುವೆ ಅಪಾರ...

ಎಲ್ಲ ಬಂದದ
ಬುಟ್ಟಿಯಲಿ ಅಡಗಿಹುದು
ಇದರ ಮಾಯೆ..
 ಎಲ್ಲ ಪ್ರೀತಿಯ
ಸಂಪ್ರೀತಿಯಲಿ ಉದುಗಿಹುದು
ಸ್ನೇಹದ ಛಾಯೆ..

 ಬಲ್ಲರು
ಎಲ್ಲರು
ಇದರ ಆಕಾರ..
ಜೀವನ
ಸಂಜೀವನ ಕಥೆಗೆ
ಇದರದೇ ಸಾಕಾರ..

ಗೆಳತಿ. .
ಸ್ನೇಹದ ಕಲ್ಪನೆಯೇ ಹೀಗೆ.
 ಅಭೂತಪೂರ್ವದ ಹಾಗೆ. .
 ಪ್ರೀತಿ, ನಿಸ್ವಾರ್ಥ,
ಪರಿಶುದ್ಧತೆ..
 ಇದುವೆ ನನ್ನ ಸ್ನೇಹದ
ಪ್ರಖರತೆ..                           
                               

                    ಕಿರಣ್ ಆತ್ರೇಯ
 


Tuesday, July 21, 2015

ವ್ಯಥೆ...



ಬೀಳು ಬಿಟ್ಟಿದೆ
ಮನಸಿನ ತುಂಬ 75ರ 
 ಹರೆಯದ ಅಸಿ ನಿದ್ದೆ. ....
 
ಒಣಕಲು ಮರದ   
ರೆಂಬೆಯ ತುದಿಯಲಿ
 ಬಣ್ಣ ಬಣ್ಣದ ದಾರವ ಕಟ್ಟಿ  
 ಪ್ರಶ್ನೆಗಳಿಲ್ಲದ
ಉತ್ತರದಾಳೆಯ ಹಾರವ,
ನೇಣಿಗೆ ಹಾಕಿ..
ಭೂತದ ಕನಸನ್ನ ತಟ್ಟಿ
ತಪ್ತ ಬದುಕಿನ ಕಂದಕವ
 - ಕುಣಿಕೆಗೆ ಹಾಕಿ
ಕುಟ್ಟುತಿದ್ದಾಳೆ - ಮುದುಕಿ 
ಹರಿದ ಭಾವನೆಯ ತುದಿ ಇಡಿದು    
ನಿರರ್ಥಕ ಕಲ್ಪನೆಯ ಸಾಲನ್ನು ನೆನೆದು 
ಕೃಷ್ಣ, ಗೋವಿಂದ ಎಂದು
ಪಟಪಟ ಜಪಿಸುತ್ತಿದ್ದಾಳೆ  
ಸುಪ್ತ ಪ್ರಪಂಚದ ಅಮಾನವೀಯತೆಗೆ.. 
ಸರ್ವಸ್ವಾತಂತ್ರದ ಪಾರಮಾರ್ಥಕತೆಗೆ..
ಜೀವನದುದ್ದಕ್ಕು ಉಂಡ
ಗೊಂದಲದ ಖಾರ್ಮೋಡಗಳ                
                 -  ವ್ಯಥೆಗೆ....          
     
                           ಕಿರಣ್ ಆತ್ರೇಯ





















Sunday, July 19, 2015

ನಿನ್ನದೆ ನೆನಪಲ್ಲಿ

ನಿನ್ನದೆ ನೆನಪಲ್ಲಿ...

 ಒಂದು ಕ್ಷಣ ಮೌನಿಯಂತೆ
 ಕೂರಲು ನನ್ನ ಹಾರ್ಟ್
ಬಿಡುವುದೆ ಇಲ್ಲ....
ಪ್ರತಿ ಬಾರಿಯು
ಗಡಿಯಾರದ ಸೆಕೆಂಡ್
ಮುಳ್ಳಿನಂತೆ ಬಾರಿಸುತ್ತದೆ...
ನಿಮಿಷಕ್ಕೆ ಅದೆಷ್ಟು ಬಾರಿಯೋ...
ಪ್ರತಿ ಬಾರಿಯು
ನಿನ್ನ ಹೆಸರೇ ನುಡಿಸುತ್ತಿರುತ್ತದೆ...
ರಾಕೆಟ್ ಗಿಂತ ವೇಗವಾಗಿ
ಚಲಿಸುವ ರಕ್ತ ಕಣಗಳು
ನಿನ್ನ ಬಿಂಬವನ್ನೇ ರವಾನಿಸುತ್ತದೆ....
ನನ್ನ ಕಣ್ಣ ಮುಂದೆ ನಿನೇ ಇದ್ದಂತೆ....
ರೈಲು ಚೆಲಿಸುವಂತೆ
ನನ್ನ ಮೆದುಳು
ನಿನ್ನದೆ ನೆನಪಲ್ಲಿ ಓಡುತ್ತಿದೆ....

ಆದರೂ ಒಂದು ಕ್ಷಣ
 ಮೌನಿಯಂತೆ ಕೂರಲು
ಪ್ರಯತ್ನಿಸುತ್ತಿರುವೆ

ನಿನ್ನದೆ ನೆನಪಲ್ಲಿ...
ನಿನ್ನದೆ ಸದ್ದಿನಲ್ಲಿ...         

                           ಕಿರಣ್ ಆತ್ರೇಯ್

Wednesday, July 15, 2015

ನಾನೇ ಮರೆಯುವ ತನಕ..


ಗೆಳತಿ..

ನಿನ್ನ
ಮರೆಯಲೆಂದು ಹೊರಟೆ..
ಒಲ್ಲದ ಮನಸ್ಸಿನಿಂದ..
 ಹೃದಯವನ್ನು ಕಲ್ಲು ಮಾಡಿದೆ..
 ಪ್ರೀತಿಯನ್ನು ಗಂಟು ಕಟ್ಟಿದೆ..
 ಬಾವನೆಗಳ ಕುಟ್ಟಿ ಪುಡಿಮಾಡಿದೆ..
ನಿನ್ನ ನೆನಪ ನನ್ನ
ರಕ್ತದಲ್ಲಿ ಅಡಗಿಸಿದೆ..
ನನ್ನ ದಾರಿಯಲ್ಲಿ
 ನಿನ್ನ ನೆನಪು ಬಾರದಂತೆ..
ಆದರೂ ಮರೆಯುತ್ತೇನೆ
 ನಿನ್ನ ನೆಪದ ಛಾಯೆಯಲಿ.

ನನ್ನ ಅಸ್ತಿತ್ವವನ್ನ
 ನಾನೇ ಮರೆಯುವ ತನಕ..   
                               ಕಿರಣ್ ಆತ್ರೇಯ

Tuesday, July 14, 2015

ಗೆಳತಿ. ..


ಗೆಳತಿ. ..

ಅಪಾರದರ್ಶಕ ವಾದ   
ಈ ಪ್ರಪಂಚದಲ್ಲಿ,
ಮುಗ್ಧತೆಯನ್ನ ಹುಡುಕುವುದು
ಬಲು ಕಷ್ಟ. ..

 ಸತ್ಯ ಕೆಲವೊಮ್ಮೆ
 ಸುಳ್ಳಾಗುತ್ತದೆ..
 ಸುಳ್ಳು ಕೆಲವೊಮ್ಮೆ
ಸತ್ಯ ದಂತೆ ಕಾಣುತ್ತದೆ. .

 ಈ ಸತ್ಯಾಸತ್ಯದ
 ಅನ್ವೇಷಣೆಯಲಿ,
 ನಿನ್ನ ಮುಗ್ಧ ಪ್ರೀತಿಯನ್ನು
ಹುಡುಕುವ ಸನ್ಯಾಸಿಯಂತಾಗಿದೆ
 ನನ್ನ ಬದುಕು.....                                      
                             ಕಿರಣ್ ಆತ್ರೇಯ. ..







Saturday, June 20, 2015

ಕವಿಯಾದೆನು


ನೋಡಿ ನಿನ್ನ ಕವಿಯಾದೆನು 
ಕಲೆಯ ರಸದ ಭಲೆಯಲಿ ಸೆರೆಯಾದೆನು......

ಹೂವಿನಂತೆ ನಾಚಿ ನಿನ್ನ ಅದರವು  
ದುಂಬಿಯಂತೆ ಕರೆಯುತಿದೆ ನನ್ನ ಭಾವವು....

 ಕೋಗಿಲೆಯ ದನಿ ನಿನ್ನ ರಿಂಗಣ ಕಂಠವು   
ಸಪ್ತ ರಸದಲಿ ಹಾಡುತಿದೆ ನನ್ನ ತನುವು....

ರೇಷಿಮೆಯ ಕಾಂತಿ ನಿನ್ನ ಹೊಳಪು ಕೇಶವು
 ಬಾವ ತರಂಗದಿ ಕಂಪಿಸಿದೆ ನನ್ನ ಮನವು.... 

ಮೀನ ದೇಹದಾಟವು ನಿನ್ನ ಚಂಚಲ ನಯನವು   
 ಕಪ್ಪೆಚಿಪ್ಪ ಮುತ್ತಂತೆ ಅರಳಿದೆ ನನ್ನ ಮಧುರ ಪ್ರೇಮವು....  

 ನೋಡಿ ನಿನ್ನ ಕವಿಯಾದೆನು
 ಕಲೆಯ ರಸದ ಭಲೆಯಲಿ ಸೆರೆಯಾದೆನು. .....                         
 
                                                  ಕಿರಣ್ ಆತ್ರೇಯ....













Wednesday, June 17, 2015

ಇಲ್ಲದಂತಾಗಿದೆ...

ಗೆಳತಿ. ..


ಇಂದೇಕೋ ಮನಸ್ಸು
ಭಗ್ನವಾದಂತ  
ಅವಶೇಷವು ಇಲ್ಲದಂತ   
 ಪ್ರೇಮಿಯಂತಾಗಿದೆ.....

ಕನಸುಗಳ ಹುಂಬಿಲ್ಲದೆ
  ಆಮಿಷ ಗಳ  ತ್ತ್ಯಾಜ್ಯ ಪರಿಕರವಿಲ್ಲದೆ 
 ಏಕಾಂಗಿಯಂತಾಗಿದೆ
 ನಿನ್ನ ನೆನಪಲ್ಲಿ..

ಕಂಡರು ನಿನ್ನ ಕಾಣದಂತೆ,
ನಟಿಸುವ ಹುಂಬತನ....
ಆಲಿಸಿದರೆ ನಿನ್ನ ದನಿಯಂತೆ,
  ಮಾತನಾಡಿಸದ ಜಂಬತನ..

 ಸ್ನೇಹದ ಪರಿಧಿಯ ಮೀರಿದರೆ
ಪ್ರೇಮದ ಅಪರಿಮಿತೆ ಕಾಡುತ್ತದೆ. .
 ಸ್ನೇಹಕ್ಕೋ ಆಯ ತಪ್ಪಿ
   ಪ್ರೇಮ ನಿರ್ಜೀವ ವಾಗುತ್ತದೆ.. 
 ಯೋಚಿಸಿದರೆ ನನ್ನ ಮನಸ್ಸು
 ತೀವ್ರ ತರ್ಕಕ್ಕೆ ಒಡ್ಡತ್ತದೆ.. 

ಸ್ನೇಹದ ಛಾಯೆ ಸಾಕಲ್ಲವೇ
  ನಿನ್ನ ಪ್ರೀತಿಸಲಿಕ್ಕೆ...
ಎಂತಾದರು ಸಾಧ್ಯವೇ
 ನಿನ್ನ ಮರೆಯಲಿಕ್ಕೆ.....

ಗೆಳತಿ 
ಇಂದೇಕೋ ಮನಸ್ಸು
 ಭಗ್ನವಾದಂತಾಗಿದೆ..
 ನನ್ನ ಅವ ಶೇಷವು  
ಇಲ್ಲದಂತಾಗಿದೆ....  

                          ಕಿರಣ್ ಆತ್ರೇಯ್. ...