Tuesday, September 22, 2015

ಗೆಳತಿ....

ನಿಜ ಹೇಳು ಗೆಳತಿ
ಯಾವ ರಸಿಕನ ಮನವ ತಣಿಸುವ
ಕಣ್ಣು ಕೋರೈಸುವ ರತ್ನ ನೀನು..
ಮುಷ್ಟಿ ಬಿಟ್ಟರೆ ಮನೆ ತುಂಬ
ಚೆಲ್ಲುವ ಮುತ್ತಿನ ಹನಿಯೇ ನೀನು...
ಕಾವ್ಯ ಕಲ್ಪಿಸುವ ನನ್ನ ಚಿತ್ತದ
ಪದಗಳನೆ ನಾಚಿಸುವ ಈ ಕವಿಯ
ಯಾವ ಜನ್ಮದ ಗೆಳತಿಯೇ ನೀನು...
ಸರಸತಿಯಿಂದ ಜನಿಸಿ, ಸೌಂದರ್ಯ
ಸೃಷ್ಟಿಸಿದ ದೇವ ಲೋಕದ ಮಾಯಗಾತಿಯೇ ನೀನು...
ನಿಜ ಹೇಳು ಗೆಳತಿ
ಯಾವ ರಸಿಕನ ಹೃದಯದಲ್ಲರಳಿದ
ಮಂದಾರ ಪುಷ್ಪದ
ಕೋಮಲಾಂಗಿಯು ನೀನು...
                            ಕಿರಣ್ ಆತ್ರೇಯ....

No comments:

Post a Comment