Tuesday, June 5, 2018

ಬಂಧಿ...

ಗರಿ ಬಿಚ್ಚಿ ಹಾರಲೆತ್ನಿಸುತಿರುವ
   ಬಾವನೆಗಳಿಗೆ ಪದಗಳ
    ಸಂಕೋಲೆ ಹಾಕಿ
ಬಿಳಿ ಹಾಳೆಯ ಮೇಲೆ
ಕವಿತೆಯಾಗಿಸಿ
   ಕವಿಯಾಗ ಬೇಕು..
   ಇಲ್ಲ
ಚಿತ್ತ ಚಿತ್ತಾರಗಳಲ್ಲಿ ಚಿತ್ರಿಸಿ
  ಕಲಾವಿದನಾಗ ಬೇಕು...

ಕೃತಿ- ವಿಕೃತಿಯ ಮನಸ್ಸಿನ 
ಪಾತ್ರಗಳನ್ನ ಸೃಷ್ಟಿಸಿ,
ಪ್ರಪಂಚದ ರಂಗ ವೇದಿಕೆಯ
ಮೇಲೆ ಸಮಾಜ ಮುಖಿಯನ್ನಾಗಿಸಿ
ನನಗಿಷ್ಟ ಬಂದಂತೆ
ಕುಣಿಸುವ
ತಣಿಸುವ
ಕಥೆಯನ್ನೆ ಎಣೆದು
ಕಥೆಗಾರನೆ ಆಗಬೇಕು..

ಎಲ್ಲವು ನನ್ನ ಕಲ್ಪನೆಯಲಿ
ಬಂಧಿಯಾಗ ಬೇಕು..
ನಾ ಕಲ್ಪನೆಯಲ್ಲಿ
ಬಂಧಿಯಾದಂತೆ...

             ಕಿರಣ್ ಆತ್ರೇಯ...
................~•~...............

No comments:

Post a Comment