Tuesday, February 23, 2016
Love your dear one
❤❤❤
#love your dear one
Unconditionally..
#love your dear one
With genuinely...
#love your dear one
Unassumingly...
#love your dear one
Without Expectantly...
#love your dear one
Always eternally...
❤ ❤❤
Kiran Atreya..
Sunday, October 4, 2015
ಕಾಯುವ ಮನಗಳು!!!!...
ಪ್ರೀತಿಗೆ ಕಾಯುತಿವೆ
ಕೆಲವು ಮನಗಳು...
ಮಳೆಯು ನಿಲ್ಲ ಬಹುದು..
ಮನೆಯು ಒಣಗ ಬಹುದು..
ಆದರೆ
ಸುರಿಯದ ಪ್ರೀತಿಯ ಮಳೆಗೆ
ಕೊಳವ ಮಾಡಿ ಹೃದಯವನ್ನ
ಜಾತಕ ಪಕ್ಷಿಯಂತೆ ಕಾಯಬಹುದೇ
ನೊಂದ ಮನಗಳು...?
ನಭದ ನಕ್ಷತ್ರಗಳಷ್ಟು
ಕನಸು ಕಟ್ಟಿ, ಭರವಸೆಯ
ನಾಳೆಗಾಗಿ ರೆಪ್ಪೆ ಬಡಿಯ
ಬಹುದೇ ಕಣ್ಣುಗಳು..?
ನೊಂದ ಜೀವಗಳು...
ಯೋಚನೆಯಲಿ ನಿಸ್ವಾರ್ಥದಿಂದ
ಕಾಯುವ ಹೃದಯಗಳಿಗೆ
ಹೇಳಬಹುದೆ..?
ನನದೊಂದು ನಮನ..
ಪ್ರೀತಿಗೆಂದು ಈ ಕವನ...
Tuesday, September 22, 2015
ಆಡಿದ ಮಾತಿಗೆ ಏಕೆ ಕೊರಗುವೆ....
ಏಕೆ ಕೊರಗುವೆ...
ಕೋಪದಲ್ಲಿ ಬಂದದಕ್ಕೆ
ಏಕೆ ಮರುಗುವೆ..
ಹೇಳುವುದು ಉಚಿತ..
ಧೀರ್ಘಕಾಲದ
ದ್ವೇಷ ಅನುಚಿತ..
ನಿನ್ನ ವ್ಯಕ್ತಿತ್ವಕ್ಕೆ
ಬಾರದು ಧಕ್ಕೆ..
ಅವಕಾಶವಾದಿಗಳು
ಎಲ್ಲದಕ್ಕೂ
ಹಾಕಬಹುದು ಕೊಕ್ಕೆ...
ಅಳೆಯುವುದು ಮೂರ್ಖತನ..
ಸಮಯ ಸಂದರ್ಭಕ್ಕೆ
ವರ್ತಿಸುವುದೇ ಜಾಣತನ...
ನಿನ್ನ ತಪ್ಪು ಏನೂ ಇಲ್ಲ...
ಮರುಕಕ್ಕೆ
ನಿನ್ನದು ತಪ್ಪೇಅಲ್ಲ....
ಕಿರಣೋಕ್ತಿ....
ಪ್ರೇಮವೆಂದರೆ....
ಮಾತೆ ಬರದ ಮೌನ..
ಮನಸಿನಾಲಯದಲಿ ಪ್ರೇಮ
ಚುಕ್ಕಿಯ ಆಟ..
ಹೃದಯಾಲಯದಲಿ ಅವಳ
ಬಡಿತದ ಓಟ..
ಚಂದ್ರನ ಪ್ರೇಮವೆಷ್ಟೆಂದು..
ಚಂದ್ರನು ಬೆಪ್ಪಾದ ನನ್ನ ಮೇಲೆ
ಇವರ ವ್ಯಾಮೋಹ ಎಷ್ಟೊಂದು..
ಪ್ರೇಮಿಗಳ ಹೃದಯ..
ಶಿವನ ಕೃಪೆಯ ಮಾಯೆಗೆ
ಎಲ್ಲವನ್ನು ಮರೆತಿದೆ
ಈ ಜಗದ ಹೃದಯ...
ಗೆಳತಿ....
ಯಾವ ರಸಿಕನ ಮನವ ತಣಿಸುವ
ಕಣ್ಣು ಕೋರೈಸುವ ರತ್ನ ನೀನು..
ಮುಷ್ಟಿ ಬಿಟ್ಟರೆ ಮನೆ ತುಂಬ
ಚೆಲ್ಲುವ ಮುತ್ತಿನ ಹನಿಯೇ ನೀನು...
ಕಾವ್ಯ ಕಲ್ಪಿಸುವ ನನ್ನ ಚಿತ್ತದ
ಪದಗಳನೆ ನಾಚಿಸುವ ಈ ಕವಿಯ
ಯಾವ ಜನ್ಮದ ಗೆಳತಿಯೇ ನೀನು...
ಸರಸತಿಯಿಂದ ಜನಿಸಿ, ಸೌಂದರ್ಯ
ಸೃಷ್ಟಿಸಿದ ದೇವ ಲೋಕದ ಮಾಯಗಾತಿಯೇ ನೀನು...
ಯಾವ ರಸಿಕನ ಹೃದಯದಲ್ಲರಳಿದ
ಮಂದಾರ ಪುಷ್ಪದ
ಕೋಮಲಾಂಗಿಯು ನೀನು...
Sunday, September 20, 2015
ಸ್ಪೂರ್ತಿ....
ನನ್ನ ಸ್ಫೂರ್ತಿ ಮಾತಿಗೆ
ನೀ ಏಕೆ ಕಾಯುವೆ.?
ಅನ್ಯರ ಪ್ರೋತ್ಸಾಹ ಎಷ್ಟು ದಿನ..?
ಅದು ಮಾತ್ರ ಅವರು ಇರುವಷ್ಟುದಿನ
ಸ್ವಯಂಬೆಳಗುವ
ಸೂರ್ಯ ಶಾಶ್ವತ...
ಕಿರಣವನ್ನ ಹೀರಿ
ಪ್ರತಿಫಲಿಸುವ ತುಂಬು
ಚಂದಿರನೆಂದೂ ಅಶಾಶ್ವತ..
ನಿನ್ನಲ್ಲಿನ ಸ್ಫೂರ್ತಿಯನ್ನ..
ನೀನೇ ಅಂಟಿಸು
ನಿನ್ನಲ್ಲಿನ ಜ್ಞಾನ ಜ್ಯೋತಿಯನ್ನ..
ಉರಿದು ಅನ್ಯರಿಗು ಚೇತನವಾಗಲಿ..
ತಮೋಭೀತಿ ಸುಟ್ಟು ಜಗವೇ
ಬೆಳಕಾಗಲಿ...
ಕಿರಣೋಕ್ತಿ....
ಒಂದು ದಿನ....
Sunday, September 6, 2015
ಏನನ್ನಲೆ..
ಏನನ್ನಲೆ
ನಿನ್ನ ಏನನ್ನಲೆ...
ಭಾವದ ಕಾರಂಜಿಯಲಿ
ಹೊಮ್ಮಿ ಹರಿದವಳೆ..
ಜುಳು ಜುಳು ಅಲೆಯಲಿ
ರಸಜೀವ ತುಡಿದವಳೆ..
ತಿಳಿ ಆಗಸದಲಿ
ವಿಶಾಲತೆಯ ದೀರ್ಘತೆಯಲಿ
ಹಕ್ಕಿಯಂತೆ ಬಂದವಳೆ..
ವೇಣುವಿನಾದದ
ಅಣು ಅಣುವಿನಲಿ
ಶುಭ್ರತೆಯ ಭವ್ಯತೆಯಲಿ
ಪರಿಮಳವ ತಂದವಳೆ..
ಹದಿಹರೆಯದ
ಮನಸ್ಸಿನ ಮಾತಾಗಿ..
ಒಲವಿನ ಪ್ರಣಯದ
ಲತೆಯಾಗಿ..
ನನ್ನ ಮನದ
ಕಲ್ಪನೆಯಾಗಿ..
ಪದವಾಗಿ ಬಂದವಳೆ
ಬಂದು ನನ್ನಲ್ಲೆ ನಿಂತವಳೆ
ಏನನ್ನಲೆ ನಿನ್ನ ಏನನ್ನಲೆ,
ಹೆಣ್ಣೆನ್ನಲೆ..
ಅಥವಾ ಕವಿತೆಯೆನ್ನಲೆ..!!
ಕಿರಣ್ ಆತ್ರೇಯ್....
.......
ಗೆಳತಿ..,
ಇಪ್ಪತ್ತೈದು ಕಳೆದೇ
ಹೋಯಿತು.
ನನ್ನ ಅಸ್ತಿತ್ವವಕ್ಕೆ..
ನಿತ್ಯ ಬದುಕೇ
ಕನಸಾಯಿತು.
ಈಗಿನ ವರ್ತಮಾನಕ್ಕೆ..
ನಾಳೆಯ ನಿತ್ಯ ನೂತನಕ್ಕೆ
ಇಂದೇ ಬರೆಯಬೇಕು ಭಾಷ್ಯ...
ನಾವು ಅಂದುಕೊಂಡದ್ದು
ಆಗದಿರುವುದೇ ಮುಂದಿನ ಭವಿಷ್ಯ...
ಕಷ್ಟದ ನಂತರ
ಸುಖ ಸಾಮಾನ್ಯ..
ಗೆಲುವಿನ ನಂತರದ
ಸೋಲು ಅದಮ್ಯ. .
ಸಮುದ್ರ ಮಂಥನದಲ್ಲಿ
ವಾಸುಕಿಯ ನರಳಿನಾಕ್ರೋಷದಲ್ಲಿ.
ವಿಷವೇ ಆದದ್ದು ಅಮೃತ...
ಜೀವನ ಜಾತ್ರೆಯಲ್ಲಿ
ದೇಹನ ಮೆರವಣಿಗೆಯಲ್ಲಿ
ನಂಬಿಕೆಯೇ ಉಸಿರಾಗಬೇಕು
ಅನವರತ...
ಈ ಸುಖದುಃಖದಲಿ
ನನ್ನ ಅಸ್ತಿತ್ವವಕ್ಕೆ.
ನನ್ನ ಉದರ ನಿಮಿತ್ತಕ್ಕೆ..
ನಿತ್ಯ ಕರ್ಮಾನುಷ್ಟಾನವೊಂದೇ..
ಅದು ಶ್ರದ್ಧೆಯಲಿ, ಬದ್ಧತೆಯಲಿ,
ಇಲ್ಲ ನಿನ್ನ ಆಗಮನದ
ನಿರೀಕ್ಷೆಯಲಿ...
ಕಿರಣ್ ಆತ್ರೇಯ್....
